ಬೆಳಗಾವಿ:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ತಲಾ ಒಂದೊಂದು ಕೋಟಿ ಘೋಷಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ಕೊಡಬೇಕು ಅಂತಾ ನಾನು ಕೂಡ ಒತ್ತಾಯ ಮಾಡ್ತೀನಿ. ಸರ್ಕಾರ ಅಷ್ಟೇ ಅಲ್ಲ ಆರ್‌ಸಿಬಿ ಫ್ರಾಂಚೈಸಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅವರೂ ಕೊಡಬೇಕು. ಬರೀ ಹತ್ತು ಲಕ್ಷ ಅಲ್ಲ ಒಂದೊಂದು ಕೋಟಿ ಪರಿಹಾರ ಕೊಡಬೇಕು ಅಂತ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಎಷ್ಟೇ ಪರಿಹಾರ ಕೊಟ್ರೂ ಸತ್ತ ಜೀವ ವಾಪಸ್ ತರಲು ಆಗಲ್ಲ. ವಿಪಕ್ಷದವರು ಜನರ ದಿಕ್ಕು ತಪ್ಪಿಸಲು ಏನು ಮಾಡಬೇಕೋ ಅದನ್ನ ಮಾಡ್ತಾರೆ. ನಮ್ಮ ಹಿರಿಯರು ಏನೇನೋ ಉತ್ತರ ಕೊಡಬೇಕು ಕೊಡ್ತಾರೆ. ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಾಗಿದ್ರೇ ತನಿಖೆಯಿಂದ ಗೊತ್ತಾಗುತ್ತೆ ಅಂತ ಹೇಳಿದ್ದಾರೆ.


