ಕುಂಭಮೇಳದಲ್ಲಿ ಕಾಲ್ತುಲಿತ ಪ್ರಕರಣ: ಬೆಳಗಾವಿ ಮೂಲದ ತಾಯಿ, ಮಗಳು ಸಾವು!

0
Spread the love

ಪ್ರಯಾಗರಾಜ್‌: ಮಹಾ ಕುಂಭಮೇಳದ ಸಂಗಮ್ ಪ್ರದೇಶದಲ್ಲಿ ಕಾಲ್ತುಳಿತ ಸಂಭವಿಸಿ ಪ್ರಾಣಹಾನಿ ಸಂಭವಿಸಿವೆ. ಇನ್ನೂ ಇನ್ನು ಪ್ರಯಾಗರಾಜ್​ನ ಕುಂಭಮೇಳದಲ್ಲಿ ಕಾಲ್ತುಳಿತದ ಪ್ರಕರಣದಲ್ಲಿ ಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ.

Advertisement

ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್ ಎಂದು ಮೃತರನ್ನು ಗುರುತಿಸಲಾಗಿದೆ. ಕುಂಬಮೇಳದಲ್ಲಿ ಕಾಲ್ತುಳಿದ ಬಳಿಕ ಇಬ್ಬರನ್ನೂ ಪ್ರಯಾಗ್‍ರಾಜ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೆ ಇಂದು ಬೆಳಗ್ಗೆಯಿಂದ ಇಬ್ಬರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫೋನ್‌ ರಿಂಗ್ ಆಗುತ್ತಿದ್ದರೂ, ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು. ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 13 ಜನರ ತಂಡದಲ್ಲಿ ಅವರು ತೆರಳಿದ್ದರು ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here