ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ 23ನೇ ವಾರ್ಡಿನ ಹಂಪಿನಗೇರಿ ಓಣಿಯಲ್ಲಿರುವ ಸರಫರಾಜ ಲಕ್ಕುಂಡಿಯವರ ಮನೆಯಿಂದ ರೆಹಮಾನಿಯಾ ಮಸ್ಜಿದ್‌ವರೆಗಿನ ಚರಂಡಿ ನಿರ್ಮಾಣ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ನಗರಸಭೆಯ ಸದಸ್ಯ ಹಾಗೂ ವಿರೋಧ ಪಕ್ಷದ ಉಪನಾಯಕರಾದ ಜನಾಬ ಬರಕತಲಿ ಮುಲ್ಲಾ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜನಾಬ ಆಶೀಪ್ ಮುಲ್ಲಾ, ಖಾಜಾ ಮೇಸ್ತಿç, ಎನ್.ಎ. ಲಕ್ಕುಂಡಿ, ಸಮೀರ್ ಜಮಾದಾರ, ಮುಸ್ತಾಕ್ ಮನಿಯಾರ, ನಜೀರ ಕುನ್ನಿಬಾವಿ, ಅಸ್ಲಮ್ ಮನಿಯಾರ, ಅಲ್ತಾಫ್ ಅಣ್ಣಿಗೇರಿ, ಶಾಹೀದ ಮುಲ್ಲಾ, ಅಲ್ತಾಫ್ ಮುಜಾವರ, ಶಾಬಾಜ್ ಮುಲ್ಲಾ, ಹನಮಂತ ಕುರುಬರ, ಮುಸ್ತಾಕ್ ಲಕ್ಕುಂಡಿ, ಶಮ್ಮು ಅಣ್ಣಿಗೇರಿ, ಶಶಿಧರ್ ಇರಕಲ್, ಅಬ್ದುಲ್ ಸತ್ತಾರ್ ಕೊಪ್ಪಳ, ಫಾರೂಕ್ ಅಕ್ಕಿ, ನಾಝಿಮ್ ಬಿಕ್ಕುನರ್, ನಾಶಿರ್ ತಾಂಬುಲಿ, ಸೈಪಣ್ಣವರ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸ್ಭೆರಿದಂತೆ ಓಣಿಯ ಸಮಸ್ತ ನಾಗರಿಕರು ಹಾಗೂ ವಾರ್ಡಿನ ಮುಖಂಡರು ಉಪಸ್ಥಿತರಿದ್ದರು.