ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಚುನಾವಣಾ ಪ್ರಚಾರಾರ್ಥವಾಗಿ ಹುಬ್ಬಳ್ಳಿಯ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ ಹಾಗೂ ಗದಗಿನ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ಸೇರಿ, ಗದಗ ಜಿಲ್ಲೆಯ ಎಲ್ಲಾ 17 ಜಮಾತಿನ ಮುತ್ವವಲ್ಲಿಗಳ ಸಭೆ ಸೇರಿ ರಾಜ್ಯ ವಕ್ಫ್ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿದ ಅನ್ವರ್ ಬಾಷಾ ಹಾಗೂ ಸರ್ವರ್ ಬೇಗ್ ಇವರಿಗೆ ಮತ ಚಲಾಯಿಸಬೇಕೆಂದು ಎಲ್ಲಾ ಮತದಾರ ಬಾಂಧವರಲ್ಲಿ ವಿನಂತಿಸಿದರು.
ನ. 19ರಂದು ಬೆಳಗಾವಿಯ ಜಿಲ್ಲಾಧಿಕಾರಿ ಆವರಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯುವ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಮತ ಚಲಾಯಿಸಬೇಕೆಂದು ವಿನಂತಿ ಮಾಡಿಕೊಂಡರು.
ಅದರಂತೆ ಗದಗ ಜಿಲ್ಲಾ ವಕ್ಫ್ ಅಡೈಜರಿ ಕಮಿಟಿ ಚೇರಮನ್ ಜಿ.ಎಂ. ದಂಡಿನವರು ಸಹ ನಮ್ಮ ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ಅನ್ವರ್ ಬಾಷಾ ಹಾಗೂ ಸರ್ವರ್ ಬೇಗ್ ಅವರಿಗೆ ಮತ ಚಲಾಯಿಸಿವಂತೆ ಕೇಳಿಕೊಂಡರು. ಡಿ.ಆರ್ ಪಾಟೀಲರು ಸಹ ಎಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸಬೇಕೆಂದು ಕೇಳಿಕೊಂಡರು.
ಸಚಿವ ಡಾ. ಹೆಚ್.ಕೆ. ಪಾಟೀಲರ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸುತ್ತೇವೆಂದು ಎಲ್ಲ ಮುತುವಲ್ಲಿಗಳು ಭರವಸೆ ನೀಡಿದರು. ಕೊನೆಗೆ ಎಂ.ಸಿ. ಶೇಖ ವಂದಿಸಿದರು.