ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್’ನಿಂದ ಉಂಟಾಗುತ್ತಿರುವ ದೋಷಪೂರಿತ ಪರಿಣಾಮಗಳನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಹಾಕಿದೆ. ಅನೇಕರು ಈ ನಿಖರ ಚಟುವಟಿಕೆಗೆ ಬಲಿಯಾಗಿ ಕೋಟ್ಯಾಂತರ ರೂಪಾಯಿ ಸಾಲದಲ್ಲಿ ಮುಳುಗಿ ಕೊನೆಗೆ ಆತ್ಮಹತ್ಯೆಗೂ ಶರಣಾಗಿರುವ ಘಟನೆಗಳು ನಡೆದಿವೆ.
ಹೊಸ ಮಸೂದೆ ಪ್ರಕಾರ, ರಾಜ್ಯ ಸರ್ಕಾರ ಕರ್ನಾಟಕ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರವನ್ನು ರಚಿಸಲು ನಿರ್ಧರಿಸಿದೆ. ಈ ಪ್ರಾಧಿಕಾರ ನೂತನ ಕಾನೂನುಗಳ ಜಾರಿಗೆ ನಿಗಾ ವಹಿಸುವುದು. ಅನುಪಾಲನೆ ಹಾಗೂ ನಿಯಂತ್ರಣ ಉಸ್ತುವಾರಿ ನಿಭಾಯಿಸುವುದು. ಕೇವಲ ಕೌಶಲ್ಯ ಆಧಾರಿತ ಆಟಗಳಿಗೆ ಅನುಮತಿ ನೀಡುವುದು
ಈ ಹಿನ್ನೆಲೆಯಲ್ಲಿ, ಸರ್ಕಾರ ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆ 2025 ಅನ್ನು ರೂಪಿಸಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿದೆ. ಮಸೂದೆ ಪ್ರಕಾರ, ಅದೃಷ್ಟದ ಮೇಲೆ ಅವಲಂಬಿತವಾಗಿರುವ ಆಟಗಳು,
ಸ್ಪರ್ಧೆಗಳು ಅಥವಾ ಚಟುವಟಿಕೆಗಳು ನಿಷೇಧವಾಗುತ್ತವೆ. ಇವುಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ಪ್ರಮುಖವಾಗಿವೆ. ಆದರೆ, ಗೇಮ್ ಆಫ್ ಸ್ಕಿಲ್, ಅಂದರೆ ಕೌಶಲ್ಯ ಆಧಾರಿತ ಆಟಗಳಿಗೆ ಮಾತ್ರ ವಿನಾಯತಿ ನೀಡಲಾಗುತ್ತದೆ. ಇದು ಯುವಜನತೆಯ ಭವಿಷ್ಯವನ್ನು ಕಾಪಾಡುವ ಪ್ರಯತ್ನ ಎಂದು ಸರ್ಕಾರ ತಿಳಿಸಿದೆ.