ಮೈಸೂರು: ಅನುದಾನ ಸಿಗುತ್ತಿಲ್ಲವೆಂದು ಹೇಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಸೂಕ್ತವಾಗಿ ಅನುದಾನ ಸಿಗುತ್ತಿಲ್ಲವೆಂದು ಹೇಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು,
Advertisement
ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಅನುದಾನ ನೀಡಬೇಕೆಂದು ಹಣಕಾಸು ಆಯೋಗ ನಿರ್ಧರಿಸುತ್ತದೆಯೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಹೇಳಿದರು. ಹಣಕಾಸು ಆಯೋಗಗಳ ರಚನೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಲ್ಲ, 1952 ರಿಂದ ನಡೆದುಕೊಂಡು ಬಂದಿರುವ ಪದ್ಧತಿ ಇದು,
ಆಗ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಮೊದಲ ಹಣಕಾಸು ಆಯೋಗ ರಚಿಸಿದ್ದು, ಆಯೋಗಗಳಿಂದ ತಾರತಮ್ಯ ನಡೆಯುತ್ತಿದ್ದರೆ ಯುಪಿಎ ಸರ್ಕಾರ ಇದ್ದಾಗ ಯಾಕೆ ಅದನ್ನು ಸರಿಮಾಡಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.