ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜೆ.ಟಿ. ಕಾಲೇಜಿನಲ್ಲಿ ಮಂಗಳವಾರ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಡನೆ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಟಿ. ಶ್ಯಾಮ ಭಟ್ ಅವರು ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವರು, ಮಾನವ ಆಯೋಗದ ಘಟಕಗಳನ್ನು ತಾಲೂಕು, ಗ್ರಾಮ ಮಟ್ಟದಲ್ಲಿಯೂ ಪ್ರಾರಂಬಿಸುವಂತೆ ಕೇಳಿದಾಗ ಅಯೋಗದ ಸದಸ್ಯರು ಅದಕ್ಕೆ ಉತ್ತರಿಸಿ, ಈಗ ಮಾನವ ಹಕ್ಕುಗಳ ಆಯೋಗ ಮುಖ್ಯ ಸಂಸ್ಥೆ ಬೆಂಗಳೂರಿನಲ್ಲಿದ್ದು, ತಮ್ಮ ಸಲಹೆಯಂತೆ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪ್ರಾರಂಭಿಸುವ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಇನ್ನೋರ್ವ ವಿದ್ಯಾರ್ಥಿ, ಮಾನವ ಹಕ್ಕುಗಳ ಆಯೋಗಕ್ಕೆ ಯಾವುದೇ ರೀತಿಯ ಹೆಸರನ್ನು ನಮೂದಿಸಿದೆ ಮೂಕರ್ಜಿ ನೀಡಬಹುದೇ ಎಂದು ಪ್ರಶ್ನಿಸಿದಾಗ, ಆಯೋಗದ ಅಧ್ಯಕ್ಷರು ಉತ್ತರಿಸಿ, ಯಾವುದೇ ರೀತಿಯ ದೂರುಗಳಿದಲ್ಲಿ ಹೆಸರನ್ನು ನಮೂದಿಸಿ ಅಹವಾಲು ನೀಡಬೇಕು ಅಥವಾ ಖುದ್ದಾಗಿ ದೂರುದಾರ ಅಹವಾಲು ನೀಡಲು ನಿರಾಕರಿಸಿದರೆ ಅವರ ಬದಲಾಗಿ ಬೇರೆಯವರು ಅಹವಾಲನ್ನು ತಮ್ಮ ಹೆಸರಲ್ಲಿ ನೀಡಬಹುದಾಗಿದೆ ಎಂದರು.
ಮಾನವ ಹಕ್ಕುಗಳ ಅಯೋಗದ ಹೆಸರನ್ನು ಕೆಲವರು ತಮ್ಮ ವಾಹನಗಳಲ್ಲಿ ಬಳಸಿಕೊಳ್ಳುತ್ತಾರೆ ಎಂದಾಗ, ಅಯೋಗದ ಸದದ್ಯರಾದ ಎಸ್.ಕೆ. ವಂಟಿಗೋಡಿ ಪ್ರತಿಕ್ರಿಯಿಸಿ, ಮಾನವ ಹಕ್ಕು ಅಯೋಗದ ಹೆಸರು ಬಳಸಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಅಂತಹ ವಾಹನಗಳು ಕಂಡುಬಂದಲ್ಲಿ ಆಯೋಗದ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಕಾನೂನು ವಿದ್ಯಾರ್ಥಿಗಳು ಸಮಾಜ ಸುಧಾರಣೆಯ ಅಭಿಯಂತರರು ಇದ್ದಂತೆ. ಮಾನವ ಹಕ್ಕು ಅಯೋಗದ ಕಾರ್ಯ ಮತ್ತು ಮಹತ್ವವನ್ನು ತಿಳಿದುಕೊಂಡು, ಧೈರ್ಯದಿಂದ ಸಮಾಜ ಸುಧಾರಣೆಯ ಕೆಲಸವಾಗಬೇಕು.
ಮಾನವ ಹಕ್ಕುಗಳ ಆಯೋಗದ ವಿಷಯ ಮೇಲೆ ತರಬೇತಿ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಆಯೋಗದ ಕಾರ್ಯದರ್ಶಿ ಎ.ದಿನೇಶ್ ಸಂಪತ್ ರಾಜ್, ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.