ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ 14 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಹಾಗೂ ಹಿರಿಯರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ನೂರಾರು ಚೆಸ್ ಪಟುಗಳು ಉತ್ತಮ ಸ್ಪರ್ಧೆ ನೀಡಿ ಪ್ರಶಸ್ತಿ, ನಗದು ಬಹುಮಾನ ಪಡೆದುಕೊಂಡಿದ್ದಾರೆ.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ: ಗುಬಬರ್ಗಾದ ಅನೀಶ ಸಿ.ಮೋರೆ (ಪ್ರಥಮ), ಗದಗನ ದಿಂಗಾಲೇಶ ಚಂಗಳಿ (ದ್ವಿತೀಯ), ಧಾರವಾಡದ ಉಸ್ಮಾನಖಾನ (ತೃತೀಯ).
14 ವರ್ಷದೊಳಗಿನ ಬಾಲಕಿಯರ ವಿಭಾಗ: ಗದಗನ ಸುಭಿಕ್ಷಾ ಚಂಗಳಿ (ಪ್ರಥಮ), ಕಲಬುರ್ಗಿಯ ಲೆಸ್ಸಿ ವಲ್ಲಮಶೆಟ್ಟಿ (ದ್ವಿತೀಯ), ಶಿರಹಟ್ಟಿಯ ಸಹನಾ ಎಂ (ತೃತೀಯ).
17 ವರ್ಷದೊಳಗಿನ ಬಾಲಕರ ವಿಭಾಗ: ಗದಗನ ನಂದಕುಮಾರ ಸುಳಿಗೇರಿ (ಪ್ರಥಮ), ಕಲಬುರ್ಗಿಯ ಸಯಾನ ಪರಮಾರ (ದ್ವಿತೀಯ), ಹುಬ್ಬಳ್ಳಿಯ ವಿರಾಜ ಕಟ್ಟಿಮನಿ (ತೃತೀಯ).
17 ವರ್ಷದೊಳಗಿನ ಬಾಲಕಿಯ ವಿಭಾಗ: ಧಾರವಾಡದ ಶ್ರಾವಣಿ ನಾಯಕ (ಪ್ರಥಮ), ಗದಗನ ಸಿಂಚನಾ ಕಟ್ಟೆಣ್ಣವರ (ದ್ವಿತೀಯ), ಧಾರವಾಡದ ಅದ್ವಿಕಾ ಶೆಟ್ಟಿ (ತೃತೀಯ).
ಪುರುಷರ ಮುಕ್ತ ವಿಭಾಗ: ಗದಗನ ಪ್ರಹ್ಲಾದ ಮಾಂಡ್ರೆ (ಪ್ರಥಮ), ಧಾರವಾಡ ಶ್ರೀಪಾದ ಕೆ.ವಿ (ದ್ವಿತೀಯ), ಹುಬ್ಬಳ್ಳಿಯ ನಾಗರಾಜ ಕುಲಕರ್ಣಿ (ತೃತೀಯ).
ಮಹಿಳೆಯರ ಮುಕ್ತ ವಿಭಾಗ: ಹುಬ್ಬಳ್ಳಿಯ ಲೆಸ್ಸಿ ಶೆಟ್ಟಿ (ಪ್ರಥಮ), ಬಳ್ಳಾರಿಯ ಸುಜಾತ ವೈ(ದ್ವಿತೀಯ), ಶಿರಸಿಯ ಪ್ರೀತಿ ಶೆಟ್ಟಿ (ತೃತೀಯ).
ಅತ್ಯಂತ ಹಿರಿಯರ ವಿಭಾಗ: ಶಿರಸಿಯ ರಾಮಚಂದ್ರ ಭಟ್ ಮತ್ತು ಕಿರಿಯರ ವಿಭಾಗದಲ್ಲಿ ಧಾರವಾಡದ ಅನ್ವಿತ ದೇವಿಹೊಸೂರ ಟ್ರೋಪಿ ಮತ್ತು ನಗದು ಬಹುಮಾನ ಪಡೆದುಕೊಂಡರು. ಪಟ್ಟಣದ ತಟ್ಟಿ ವಿಕಲಚೇತನ ಶಾಲೆಯ 5 ವಿದ್ಯಾರ್ಥಿಗಳು ಚೆಸ್ ಸ್ಪರ್ಧೆಯಲ್ಲಿ ಸೆಣಸಾಟ ನಡೆಸಿ ಗಮನ ಸೆಳೆದರು.
ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಬಳಿಗಾರ ಉದ್ಘಾಟಿಸಿದರು. ಪಟ್ಟಣದ ಎಂ.ಕೆ. ಕಳ್ಳಿಮಠ ಪ್ರಶಸ್ತಿ ವಿತರಿಸಿದರು. ಅಧ್ಯಕ್ಷ ಗಿರೀಶ ಅಗಡಿ, ಗೌರವಾಧ್ಯಕ್ಷ ರಾಮರಾವ್ ವೇರ್ಣೆಕರ, ಎಂ.ಕೆ. ಕಳ್ಳಿಮಠ ಇದ್ದರು.