ಚದುರಂಗದಿಂದ ಮೆದುಳಿಗೆ ಅಗಾಧ ಜ್ಞಾನ

0
State Level Junior and Senior Chess Competition
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಚದುರಂಗ ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲೊಂದು. ಕೆಲವರ ವರ್ಣನೆಯಂತೆ, ಇದು ಕೇವಲ ಆಟವಾಗಿರದೆ ಇದೊಂದು ಕಲೆ, ವಿಜ್ಞಾನ, ವರ್ಚುಯಲ್ ಯುದ್ಧಕಲೆ ಮತ್ತು ಮಾನಸಿಕ ವ್ಯಾಯಾಮ ಎಂದು ವರ್ಣಿಸಿದವರೂ ಉಂಟು ಎಂದು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಹೇಳಿದರು.
ನಗರದ ಸೇವಾಲಾಲ ಸಮುದಾಯ ಭವನದಲ್ಲಿ ರವಿವಾರ ಎಸ್.ಕೆ. ಇವೆಂಟ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ರಾಜ್ಯ ಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ಚಂದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಮೆದುಳಿಗೆ ಬುದ್ಧಿ ಪ್ರವೇಶವಾದರೆ ಯಾವತ್ತೂ ಕಳೆದು ಹೋಗುವುದಿಲ್ಲ. ಬುದ್ಧಿಶಕ್ತಿ ಸಕ್ರಿಯವಾಗಿರುವವರೆಗೆ ಸಾಧನೆ ಸಾಗುತ್ತಾ ಹೋಗುತ್ತದೆ. ಚದುರಂಗವನ್ನು ಆಡುವುದರಿಂದ ಮೆದುಳಿಗೆ ಅಗಾಧ ಜ್ಞಾನ ಸಿಗುತ್ತದೆ ಮತ್ತು ಜೀವನದಲ್ಲಿ ಬರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಬಳಿಕ ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ ಮಾತನಾಡಿ, ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಚೆಸ್ ಆಡುವುದರಿಂದ ಮಕ್ಕಳಲ್ಲಿ ಬುದ್ಧಿ ಚುರುಕಾಗುವ ಜತೆಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.
ಯುವ ಮುಖಂಡ, ಗುತ್ತಿಗೆದಾರರಾದ ಪ್ರಕಾಶ ರಾಠೋಡ ಮಾತನಾಡಿ, ಕೆಲವರು ಚದುರಂಗ ಆಡುತ್ತಾರೆ, ಮತ್ತೆ ಕೆಲವರ ಜೀವನವೇ ಚದುರಂಗದ ಆಟದಂತೆ ಆಗಿರುತ್ತದೆ. ಚದುರಂಗದಲ್ಲಿ ಯಶಸ್ಸು ಸಿಗಬೇಕಾದರೆ ಬೌದ್ಧಿಕತೆ ಬೇಕು. ತಂತ್ರಗಾರಿಕೆ, ಬುದ್ಧಿ ಚುರುಕು ಮತ್ತು ತೀಕ್ಷ್ಣ ಆಗಿರಬೇಕು ಎಂದರು.
ಎಸ್.ಕೆ. ಇವೆಂಟ್ ಮ್ಯಾನೇಜ್ಮೆಂಟ್‌ನ ಸದಸ್ಯ ಶೀತಲ್ ಓಲೇಕಾರ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಚದುರಂಗದ ಆಟಕ್ಕೆ ಉತ್ತೇಜನ ನೀಡಬೇಕು ಎನ್ನುವ ಕಾರಣಕ್ಕಾಗಿ ಮತ್ತು ಜನರಲ್ಲಿ ಚೆಸ್ ಜಾಗೃತಿ ಮೂಡಲಿ ಎನ್ನುವ ಕಾರಣಕ್ಕೆ ಎಸ್.ಕೆ. ಇವೆಂಟ್ ಮ್ಯಾನೇಜ್ಮೆಂಟ್ ಪ್ರಥಮ ಬಾರಿಗೆ ಗಜೇಂದ್ರಗಡ ಸ್ಪರ್ಧೆ ಆಯೋಜಿಸಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ನಗರ ಸೇರಿದಂತೆ ಗದಗ, ಕುಷ್ಟಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಬದಾಮಿ, ಬಾಗಲಕೋಟೆ, ಹುಲಕೋಟಿ, ಯಲಬುರ್ಗಾ, ಕೊಪ್ಪಳ ಹೀಗೆ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಭಾಗಿಯಾಗಿದ್ದರು. ಸ್ಪರ್ದೆಯ ನಿರ್ಣಾಯಕರಾಗಿ ಎಸ್.ಟಿ. ಪೂಜಾರ, ಎಚ್.ಆರ್. ನಿಡಗುಂದಿ, ಕೆ.ಎಸ್. ವನ್ನಾಲ, ಆರ್. ಜಿ.ಮ್ಯಾಕಲ್, ಮುಕುಂದ ಭಗವತಿ, ಜಾಕೀರಹುಸೇನ್ ಗೋಡೆಕಾರ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯಾಧ್ಯಕ್ಷರು ಮಂಜುನಾಥ ರಾಠೋಡ, ಖ್ಯಾತ ಗುತ್ತಿಗೆದಾರರಾದ ಪ್ರಕಾಶ ರಾಠೋಡ, ಬಸವರಾಜ ಬಂಕದ, ಯಲ್ಲಪ್ಪ ಬಂಕದ, ಕನಕಪ್ಪ ಕಲ್ಲವಡ್ಡರ, ಲೋಕಪ್ಪ ರಾಠೋಡ, ಬಸವರಾಜ ಹಿರೇಮಠ, ಸತ್ಯವಿಥ್ಯ ಪತ್ರಿಕೆ ಸಂಪಾದಕರಾದ ಚನ್ನು ಸಮಗಂಡಿ, ವಿನಾಯಕ ಜರತಾರಿ, ಅಲಿ ಮುಧೋಳ, ಹನಮಂತಪ್ಪ ಕುರಿ, ಆಯೋಜಕರಾದ ಶೀತಲ ಓಲೇಕಾರ, ನಾಜೀಯಾ ಮುದಗಲ್, ಕಿರಣ ನಿಡಗುಂದಿ, ಪ್ರಿಯಾಂಕ, ರಮೇಶ ಲಕ್ಕಲಕಟ್ಟಿ, ಆಕಾಶ ತಾಳಿಕೋಟಿ ಸೇರಿದಂತೆ ಅನೇಕರು ಇದ್ದರು.
ಫಲಿತಾಂಶ
ಜ್ಯೂನಿಯರ್ ವಿಭಾಗದಲ್ಲಿ ವೈಭವ ಪ್ರಥಮ ಸ್ಥಾನ, ನಂದಕುಮಾರ ದ್ವಿತೀಯ ಸ್ಥಾನ, ಅಮೃತಾ ತೃತೀಯ ಸ್ಥಾನ ಪಡೆದರು. ಸೀನಿಯರ್ ವಿಭಾಗದಲ್ಲಿ ಪ್ರಜ್ವಲ್ ಹರ್ತಿ ಪ್ರಥಮ ಸ್ಥಾನ, ಸಿ.ಎಸ್. ಗೋಗೇರಿ ದ್ವಿತೀಯ ಬಹುಮಾನ, ಕಿರಣ.ಡಿ. ತೃತೀಯ ಬಹುಮಾನ ಪಡೆದರು. ಸೀನಿಯರ್ ವಿಭಾಗದಲ್ಲಿ 38 ಜನ ಭಾಗಿಯಾಗಿದ್ದರು, ಜ್ಯೂನಿಯರ್ ವಿಭಾಗದಲ್ಲಿ 42 ಜನ ಭಾಗಿಯಾಗಿದ್ದರು. ಭಾಗಿಯಾದ ಎಲ್ಲ ಸ್ಪರ್ಧಾಳುಗಳಿಗೂ ಕಮಿಟಿಯಿಂದ ಪ್ರಶಂಸಾ ಪತ್ರವನ್ನು ನೀಡಲಾಯಿತು.

Spread the love
Advertisement

LEAVE A REPLY

Please enter your comment!
Please enter your name here