ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ ಹುಬ್ಬಳ್ಳಿ ಇವರು ಆಯೋಜಿಸಿದ್ದ ಅಂತರ ವಲಯ ಯುವಜನೋತ್ಸವ ಸ್ಪರ್ಧೆ-2025ರಲ್ಲಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳಾದ ರಮೇಶ ಗುರಿಕಾರ, ಪ್ರೇಮಲೇಖಾ ಜೀನೂರ, ರೋಜಾ ಮುಗಳಿ, ಪರಶುರಾಮ ಕಳಗಣ್ಣನವರ, ಶೇಖರಪ್ಪ ಈಳಗೇರ, ಮಂಜುನಾಥ ದೇಸಾಯಿ ಭಾಗವಹಿಸಿ ಹಾಸ್ಯ ನಾಟಕದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Advertisement
ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯದ ಆಡಳಿತ ವರ್ಗ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ಹೆಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕರು ಶುಭ ಕೋರಿದ್ದಾರೆ.