HomeGadag Newsಅಥ್ಲೇಟಿಕ್ಸ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಅಥ್ಲೇಟಿಕ್ಸ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆ(ಅಥ್ಲೇಟಿಕ್ಸ್)ಯಲ್ಲಿ ಭಾಗವಹಿಸಿದ ಕದಡಿಯ ಸರಕಾರಿ ಪ್ರೌಢಶಾಲೆಯ ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ನವರೀನ ನದಾಫ್ 800 ಮೀ. ಓಟ ದ್ವಿತೀಯ, ಜ್ಯೋತಿ ಕುರಹಟ್ಟಿ 3000 ಮೀ. ಓಟ ದ್ವಿತೀಯ, ಚಿಂಚನಾ ಬೆಟಗೇರಿ ಗುಂಡು ಎಸೆತದಲ್ಲಿ ದ್ವಿತೀಯ, ಚಕ್ರ ಎಸೆತ ದ್ವಿತೀಯ, ಪೂಜಾ ಹಾಲವರ 3000 ಮೀ. ನಡಿಗೆಯಲ್ಲಿ ಪ್ರಥಮ, 4*400 ಮೀ. ರೀಲೆ ಪ್ರಥಮ ಹಾಗೂ ನವರೀನ ನದಾಫ, ಜ್ಯೋತಿ ಕುರಹಟ್ಟಿ, ಅನು ಮೇಗಲಮನಿ, ತೇಜಸ್ವಿನಿ ಮೇಗಲಮನಿ, ಬಾಲಕರ ವಿಭಾಗದಲ್ಲಿ ಹೊನ್ನೆಶ ಭಗವತಿ 3000 ಮೀ. ಓಟದಲ್ಲಿ ದ್ವಿತೀಯ, ಯಲ್ಲಪ್ಪ ಕಿರೇಸೂರ 5000 ಮೀ. ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಎಸ್.ಡಿ.ಎಮ್.ಸಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು, ಕದಡಿ ಗ್ರಾಮದ ಗುರು-ಹಿರಿಯರು, ಕ್ರೀಡಾಭಿಮಾನಿಗಳು ಶುಭ ಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!