ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜ ಕಲ್ಯಾಣ ಇಲಾಖೆಯು ಜ. 11 ಹಾಗೂ 12ರಂದು ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ನೌಕರರ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಗದಗ ಜಿಲ್ಲೆಯ ಮಹಿಳಾ ಮತ್ತು ಪುರುಷ ನೌಕರರು ಒಟ್ಟು 7 ವಿಭಾಗಗಳಲ್ಲಿ ವಿವಿಧ ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Advertisement

ವೈಯುಕ್ತಿಕ ಭಾವಗೀತೆಯಲ್ಲಿ ಪ್ರಥಮ, ಕ್ರಿಕೇಟ್‌ನಲ್ಲಿ ಪ್ರಥಮ, ಸಾಮೂಹಿಕ ಜಾನಪದ ಗೀತೆಯಲ್ಲಿ ದ್ವಿತೀಯ, ಮಹಿಳಾ ವಿಭಾಗದ ಶೆಟಲ್‌ಕಾಕ್‌ನಲ್ಲಿ ದ್ವಿತೀಯ, ಥ್ರೋಬಾಲ್‌ನಲ್ಲಿ ದ್ವಿತೀಯ, ಪುರುಷರ ವಿಭಾಗದ ಶೆಟಲ್‌ಕಾಕ್ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಿರು ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಹೀಗೆ ಒಟ್ಟು 7 ಸ್ಥಾನಗಳನ್ನು ಗಳಿಸುವ ಮೂಲಕ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬೆಳಗಾವಿ ವಿಭಾಗ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟದಕ್ಕೆ ಆಯ್ಕೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ಸಹಾಯಕ ನಿರ್ದೆಶಕರನ್ನು, ಕಚೇರಿ ಅಧೀಕ್ಷಕರನ್ನು, ವಾರ್ಡನ್, ಅಡುಗೆಯವರನ್ನು ಹಾಗೂ ಅಡುಗೆ ಸಹಾಯಕರನ್ನು ಗದಗ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಮಹೇಶ ಪೋತದಾರ ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here