ಟಿ20 ವಿಶ್ವಕಪ್ ಗೆಲುವಿನ ಉಲ್ಲಾಸದಲ್ಲಿ ತೇಲುತ್ತಿರುವ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊಸ ಖಡಕ್ ಸೂಚನೆ ನೀಡಿದ್ದಾರೆ.
ಆಟಗಾರರು ಶತಕ ಅಥವಾ ಅರ್ಧಶತಕಕ್ಕಾಗಿ ವೈಯಕ್ತಿಕ ದಾಖಲೆ ಗಳಿಸಲು ಆಟವಾಡಬಾರದು, ಬದಲಾಗಿ ಟೀಮ್ ಮೊತ್ತ ಮತ್ತು ಟ್ರೋಫಿ ಗೆಲುವಿಗೆ ಆಡಬೇಕು ಎಂದು ಗಂಭೀರ್ ಒತ್ತಿ ಹೇಳಿದ್ದಾರೆ.
ಗಂಭೀರ್ ಉದಾಹರಣೆಗೆ ಸಂಜು ಸ್ಯಾಮ್ಸನ್ ಅವರ ಆಟವನ್ನು ಉಲ್ಲೇಖಿಸಿದ್ದಾರೆ. ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ ಸಂಜು, ಶತಕ ಹೊಡೆಯಲು ನಿಧಾನವಾಗಿ ಆಡದೇ, ತಂಡದ ವೇಗ ಮತ್ತು ಮೊತ್ತಕ್ಕೆ ಆದ್ಯತೆ ನೀಡಿದ್ದರಿಂದ ಭಾರತ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಗಂಭೀರ್ ಹೀಗೆ ಹೇಳಿರುವ ಉದ್ದೇಶ, ಸ್ವಾರ್ಥಕ್ಕಾಗಿ ಅಥವಾ ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಗೆಲುವಿಗಾಗಿ ಶ್ರಮಿಸಬೇಕು. ಸೂಪರ್ ಸ್ಟಾರ್ ಹುಟ್ಟುಹಾಕುವುದಲ್ಲ, ಬಲಿಷ್ಠ ತಂಡ ರೂಪಿಸುವುದೇ ಉದ್ದೇಶ. 2027 ಏಕದಿನ ವಿಶ್ವಕಪ್ಗೂ ಮುನ್ನ, ಈ ಮನೋಭಾವ ತಂಡದಲ್ಲಿ ಮೂಡಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.



