ಮೈಸೂರು:- ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ತಾಳಿಕಟ್ಟಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಜರುಗಿದೆ.
ವೀರಣ್ಣ ಕೊಲೆಯಾದ ಗಂಡ. ಶಿವಮ್ಮ ಕೊಲೆಗೈದ ಪಾಪಿ ಪತ್ನಿ. ಗಂಡ ನಿದ್ದೆಗೆ ಜಾರುತ್ತಿದ್ದಂತೆಯೇ ಪತ್ನಿ ಶಿವಮ್ಮ, ಹೊಡೆಯ ಬಾರದ ಜಾಗಕ್ಕೆ ಹೊಡೆದು ಕೊಂದು ಹಾಕಿದ್ದಾಳೆ. ಬಳಿಕ ಸೀರೆಯಿಂದ ನೇಣಿಗೆ ಹಾಕಿ ಆತ್ಮಹತ್ಯೆ ಎಂದು ಹೈಡ್ರಾಮಾ ಮಾಡಿದ್ದಳು. ಆದ್ರೆ, ಪೊಲೀಸರ ತನಿಖೆಯಲ್ಲಿ ಪತ್ನಿಯ ನವರಂಗಿ ಆಟ ಬಯಲಿಗೆ ಬಿದ್ದಿದೆ.
13 ವರ್ಷಗಳ ಹಿಂದೆ ಶಿವಮ್ಮ ವೀರಣ್ಣ ವಿವಾಹ ನೆರವೇರಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಈಕೆಗೆ ಕಳೆದ ನಾಲ್ಕು ವರ್ಷದಿಂದ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನ ಪರಿಚಯವಾಗಿತ್ತು. ಆದ್ರೆ, ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಪತಿ ವೀರಣ್ಣಗೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಅಲ್ಲದೆ ಈ ವಿಚಾರದಲ್ಲಿ ನ್ಯಾಯ ಪಂಚಾಯತಿ ಸಹ ನಡೆದಿತ್ತು. ಹಲವು ಬಾರಿ ಆತನ ಸಂಪರ್ಕ ಬಿಡುವಂತೆ ಬುದ್ದಿ ಹೇಳಲಾಗಿತ್ತು. ಹೀಗಿದ್ದೂ ಶಿವಮ್ಮ ಹಾಗೂ ಬಲರಾಮ್ ನಡುವೆ ಸಂಬಂಧ ಮುಂದುವರೆದಿತ್ತು.
ಹೀಗೆ ಮೊನ್ನೆ ರಾತ್ರಿ ಬಲರಾಮ ಫೋನ್ ಮಾಡಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ಆಗಿದೆ. ರಾತ್ರಿ ಊಟ ಮಾಡಿ ಪತಿ ಮಲಗಿದ್ದಾರೆ. ಆ ವೇಳೆ ಬಡಿಗೆಯಿಂದ ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾಳೆ. ಬಳಿಕ ಶಿವಮ್ಮ ಬಾಯಿ ಬಡಿದುಕೊಂಡು ಮನೆಯಿಂದ ಹೊರಗೆ ಓಡೋಡಿ ಬಂದು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕಥೆ ಕಟ್ಟಿದ್ದಾಳೆ.
ಆಗ ಹುಲ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕುತ್ತಿಗೆಯಲ್ಲಿ ಸೀರೆ ಕಂಡು ಬಂದಿತ್ತು. ಆದರೂ ಪೊಲೀಸರಿಗೆ ಅನುಮಾನವೂ ಇತ್ತು. ಅದರಂತೆ ಪತ್ನಿ ಶಿವಮ್ಮಳನ್ನ ವಿಚಾರಣೆಗೊಳಪಡಿಸಿದಾಗ ಬಲರಾಮ ಜೊತೆಗಿನ ಸಂಬಂಧಕ್ಕಾಗಿ ಗಂಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಹುಲ್ಲಹಳ್ಳಿ ಪೊಲೀಸರು ಶಿವಮ್ಮನನ್ಜು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


