ಹಾವೇರಿ:- ಪಟ್ಟಣದ ರಾಕೇಶ್ ಬಾರಂಗಿ ಎಂಬ ವ್ಯಕ್ತಿ ರಾಣಾ ಮತ್ತು ರಕ್ಷಿತಾ ಎಂಬ ಹೆಸರಿನ ನಾಯಿಗಳನ್ನು ಸಾಕಿದ್ದರು.
Advertisement
ರಾಕೇಶ ಬಾರಂಗಿ ಸ್ವಲ್ಪ ದಿನದ ಮಟ್ಟಿಗೆ ಶ್ವಾನಗಳನ್ನು ಸಾಕಲು ಚಂದ್ರು ಎಂಬುವವರಗೆ ನೀಡಿದ್ದರು. ಎರಡು ಜರ್ಮನ್ ಶೆಪರ್ಡ್ ತಳಿಯ ಶ್ವಾನಗಳನ್ನು ಚಂದ್ರು ಒಂದುವರೆ ತಿಂಗಳು ಪೋಷಣೆ ಮಾಡಿದ್ದರು. ಬಳಿಕ ರಾಕೇಶ್ ಬಾರಂಗಿ ಶ್ವಾನಗಳನ್ನು ಹಿಂತಿರುಗಿಸುವಂತೆ ಚಂದ್ರುಗೆ ಹೇಳಿದ್ದರು. ಆದರೆ ಚಂದ್ರು ಶ್ವಾನಗಳನ್ನು ಕೊಡಲು ಒಪ್ಪುವುದಿಲ್ಲ.
ಚಂದ್ರು ಶ್ವಾನಗಳನ್ನು ಕೊಡದೆ ಇದ್ದಾಗ ರಾಕೇಶ್ ಬಾರಂಗಿ ಪೊಲೀಸ್ ಠಾಣೆಯಲ್ಲಿ ಶ್ವಾನಗಳು ನಾಪತ್ತೆಯಾಗಿವೆ ಎಂದು ದೂರು ನೀಡಿದ್ದರು. ದೂರು ಸಂಬಂಧ ಇಬ್ಬರನ್ನು ಠಾಣೆಗೆ ಕರೆಸಿದ ಪೊಲೀಸರು ಪಂಚಾಯಿತಿ ಮಾಡಿದ್ದಾರೆ. ಸಾಕಿದ್ದ ವ್ಯಕ್ತಿ ಚಂದ್ರುಗೆ ರಾಕೇಶನಿಂದ ನಿರ್ವಹಣೆ ವೆಚ್ಚ ಕೊಡಿಸಿದ್ದಾರೆ. ಬಳಿಕ ರಾಕೇಶ್‌ಗೆ ಚಂದ್ರು ಶ್ವಾನ ಹಿಂತುರುಗಿಸಿದ್ದಾರೆ ಎಂದು ತಿಳಿದು ಬಂದಿದೆ.