ಇಂಡೋನೇಷ್ಯಾದ ಆಗ್ನೇಯ ಸುಲವೆಸಿ ಪ್ರಾಂತ್ಯದ ಮುನಾ ರೀಜೆನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.
ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎಂಬ ಒಗಟಿಗೆ ತಪ್ಪು ಉತ್ತರ ನೀಡಿದ ಗೆಳೆಯನನ್ನು ಕುಡುಕನೊಬ್ಬ ಕೊಂದಿರುವ ಘಟನೆ ಜರುಗಿದೆ.
ಕೋಳಿ ಅಥವಾ ಮೊಟ್ಟೆ ಈ ಎರಡರಲ್ಲಿ ಯಾವುದು ಮೊದಲು ಬಂದದ್ದು?” ಎಂಬ ಕ್ಲಾಸಿಕ್ ಒಗಟಿನ ಮೇಲೆ ಕುಡುಕರಿಬ್ಬರ ನಡುವೆ ವಾದ ಶುರುವಾಗಿದೆ. ಕುಡಿದ ಮತ್ತಿನಲ್ಲಿದ್ದ ಇಬ್ಬರೂ ತಾನು ಹೇಳಿದ ಉತ್ತರವೇ ಸರಿಯೆಂದು ಜಗಳವಾಡಿದ್ದಾರೆ. ಅದೇ ಕೋಪದಲ್ಲಿ ಒಬ್ಬ ಕುಡುಕ ತನ್ನ ಸ್ನೇಹಿತನನ್ನು ಇರಿದು ಕೊಂದಿದ್ದಾನೆ.
ಕೊಲೆಯ ಆರೋಪದ ಮೇಲೆ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಜುಲೈ 24ರಂದು ಈ ದುರಂತ ಘಟನೆ ನಡೆದಿದೆ. ತನ್ನ ಗೆಳೆಯನನ್ನು ಕುಡಿಯಲು ಆಹ್ವಾನಿಸಿದ ಡಿಆರ್ ಎಂಬ ವ್ಯಕ್ತಿ ಹಲವಾರು ಸುತ್ತಿನ ಡ್ರಿಂಕ್ ಮುಗಿಸಿದ್ದರು. ಆಗ ಕೋಳಿ, ಮೊಟ್ಟೆಯ ವಿಷಯ ಚರ್ಚೆಗೆ ಬಂದಿತು. ಈ ಬಿಸಿ ಬಿಸಿ ಚರ್ಚೆ ವಿಪರೀತಕ್ಕೆ ಹೋಗಿ, ಜಗಳಕ್ಕೆ ತಿರುಗಿತು. ಹೊಡೆಯಲು ಬಂದ ಡಿಆರ್ನಿಂದ ಆ ಸ್ನೇಹಿತ ತಪ್ಪಿಸಿಕೊಳ್ಳಲು ಓಡಿದ್ದಾನೆ. ಆಗ ಅವನ ಹಿಂದೆ ಓಡಿದ ಡಿಆರ್ ಅಂಗಳದಲ್ಲಿ ಬಿದ್ದಿದ್ದ ಮಣ್ಣ ಅಗೆಯುವ ಚೂಪಾದ ಆಯುಧದಿಂದ ಆತನಿಗೆ ಹೊಡೆದು ಕೊಲೆ ಮಾಡಿದ್ದಾನೆ.