ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಡೆ-ನಲ್ಮ್ ಇಲಾಖೆಯಿಂದ ಬುಧವಾರ ಕೇಂದ್ರ ಸರ್ಕಾರದ ಪಿ.ಎಮ್ ಸ್ವನಿಧಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಬಿದಿ ನಾಟಕ ಆಯೋಜನೆ ಮಾಡಲಾಗಿತ್ತು. ನಗರದ ನಟರಂಗ ಸಂಸ್ಥೆಯು ಬೀದಿ ನಾಟಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.
ಬೆಟಗೇರಿ ಹಣ್ಣು, ಹೂ, ತರಕಾರಿ, ಪಾಸ್ಟ್ ಫುಡ್ ಹಾಗೂ ಇತರೆ ವ್ಯಾಪಾರಿಗಳು ಸೇರಿ ಬಿದಿ ನಾಟಕ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಬಸವರಾಜ ಮಲ್ಲೂರ, ಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಅಧಿಕಾರಿ ಅಂಬರೀಶ, ನಗರಸಭೆ ಸಮುದಾಯ ಸಂಘಟನಾಧಿರಿ ಪ್ರಹ್ಲಾದ, ಬೀದಿ ವ್ಯಾಪಾರಿಗಳ ಮುಖಂಡರಾದ ಫಯಾಜ್ ನಾರಾಯಣಕೇರಿ, ಯಲ್ಲಪ್ಪ, ಜಿಲ್ಲಾ ಮುಖಂಡರಾದ ಮಾರುತಿ ಸೂಳಂಕೆ, ಬಾಷಾಸಾಬ ಮಲ್ಲಸಮುದ್ರ, ಮಹಮ್ಮದ್ ಅಲಿ ಅತ್ತಾರ, ತಬರೆಜ ಪಠಾಣ, ಮಮ್ತಾಜ್ ಜಾಹಂಗಿರ ಮುಳಗುಂದ, ರಾಜು ರೋಣದ, ಮಹಾಬಲಿ ಧಾರವಾಡ, ಅಸ್ಲಾಂ ಸೂಡಿ, ಮುನ್ನಾ ಬಳ್ಳಾರಿ, ರೇಣುಕಾ ಹತ್ತಿವಾಲೆ, ಖುತಿಜಾ ದೊಡ್ಡಮನಿ, ಲಕ್ಷ್ಮವ್ವ ಬೇನಾಳ, ರಾಮಣ್ಣ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ಗದಗ ನಗರದಲ್ಲಿ ಕೆ. ಹೆಚ್. ಪಾಟೀಲ ವೃತ್ತದ ಬಳಿ ಇರುವ ಬೀದಿ ವ್ಯಾಪಾರಿಗಳ ಸಹಯೋಗದಲ್ಲಿ ಹಾಗೂ ಗ್ರೇನ್ ಮಾರ್ಕೆಟ್ ವ್ಯಾಪಾರಿಗಳ ಸಂಯುಕ್ತ ಆಶ್ರಯದಲ್ಲಿ ಒಟ್ಟು ನಾಲ್ಕು ಹಂತದಲ್ಲಿ ಬಿದಿ ನಾಟಕ ಕಾರ್ಯಕ್ರಮ ನಡೆಸಲಾಯಿತು. ಎಂದು ಬಾಷಾಸಾಬ ಮಲಸಮುದ್ರ ತಿಳಿಸಿದರು.