ಬೆಂಗಳೂರು: ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ‘ಮರ, ವಿದ್ಯುತ್ ಕಂಬಗಳು, ಪಾದಚಾರಿ ಮಾರ್ಗಗಳಲ್ಲಿ ನೇತಾಡುವ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಬೇಕು.
Advertisement
ಭೂಗತವಾಗಿಯೇ ಕೇಬಲ್‌ಗಳನ್ನು ಅಳವಡಿಸಬೇಕು. ಬಹುತೇಕ ಟೆಲಿಕಾಂ ಕಂಪನಿಗಳು ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆನಂತರ ಅವರೇ ದಾರಿಗೆ ಬರುತ್ತಾರೆ ಎಂದರು.
ಇನ್ನೂ ಹೊಸ ಯೋಜನೆಗಳು, ಬೆಂಗಳೂರಿನ ರೂಪುರೇಷೆ, ಪ್ರತಿಯೊಬ್ಬ ನಾಗರಿಕನ ಆಸ್ತಿ ರಕ್ಷಣೆ ಕುರಿತು ಹೊಸ ನೀತಿ ತರಲಾಗುತ್ತಿದ್ದು, ಈ ತಿಂಗಳಾಂತ್ಯದೊಳಗೆ ಬಹಿರಂಗಗೊಳಿಸಲಾಗುವುದು ಎಂದು ಹೇಳಿದರು