ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಮುದ್ದು ವಿದ್ಯಾರ್ಥಿಗಳು ಎಂದರೆ ಸುಂದರ ಲೋಕದ ಪಕ್ಷಿಗಳಿದ್ದಂತೆ. ಅವರ ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬ ಪಾಲಕರು, ಗುರುವೃಂದ ಶ್ರಮಿಸಿದರೆ ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ ಎಂದು ಜೆ.ಟಿ. ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಹೇಳಿದರು.

Advertisement

ಡಂಬಳ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಗದಗ ಸಂಸ್ಥೆಯ ಅಧೀನದ ಬಸವೇಶ್ವರ ಆಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಮಕ್ಕಳ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಕಪ್ಪತ್ತಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವುದು ವಿಷಾದಕರ ಸಂಗತಿ. ಕಪ್ಪತ್ತಗುಡ್ಡದ ರಕ್ಷಣೆ ಮಾಡಿಕೊಳ್ಳಬೇಕು. ಅಂದಾಗ ನಾವು-ನಿವೆಲ್ಲರೂ ಈ ಭಾಗದಲ್ಲಿ ಆರೋಗ್ಯಯುತವಾಗಿರಲು ಸಾಧ್ಯ ಎಂದರು.

ಪರಿಸರವಾದಿ ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, ಲಿಂ.ಡಾ.ತೊಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮತ್ತು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ವಿಚಾರಧಾರೆಯಂತೆ ಗ್ರಾಮೀಣ ವಿದ್ಯಾರ್ಥಿಗಳು ಕೂಡಾ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಹತ್ತು ಹಲವು ಶೈಕ್ಷಣಕ ಚಟುವಟಿಕೆಯ ಮೂಲಕ ಉತ್ತಮ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಕೊಟ್ರೇಶ ಮೆನಸನಿಕಾಯಿ, ವಿಜಯಕುಮಾರ ಮಾಲಗಿತ್ತಿ ಮಾತನಾಡಿದರು. ಮಕ್ಕಳ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಜೆ.ಟಿ, ಮಠದ ವ್ಯವಸ್ಥಾಪಕರಾದ ಜಿ.ವಿ. ಹಿರೇಮಠ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗವಿಸಿದ್ಧಪ್ಪ ಬಿಸನಳ್ಳಿ, ಮುಖ್ಯೋಪಾಧ್ಯಾ ಶಂಕರ ಕಲ್ಲಿಗನೂರ, ಸಂಜೋತಾ ಸಂಕಣ್ಣವರ, ಜ್ಯೋತಿ ಶಿರೂರ, ಧನಸಿಂಗ ರಾಠೋಡ, ಪ್ರಕಾಶ ತಳವಾರ, ಗೌರಮ್ಮ ಕೋತಂಬ್ರಿ, ನೇತ್ರಾ ಫರಂಗಿ, ಅನುರಾಧಾ ರಾಮೇನಳ್ಳಿ, ಶಶಿಕಲಾ, ಗೀತಾ ಕೊಳ್ಳಾರ, ಜಯಶ್ರೀ ಪತ್ತಾರ, ಚೈತ್ರಾ ತಳಕಲ್ಲ, ಸಿದ್ಧಮ್ಮ ಬಾವಿ, ಪಾಲಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here