ಭಾರತವನ್ನು ಸುಭದ್ರವಾಗಿಸಲು ಶ್ರಮಿಸಿ

0
raju
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಶೇ.95ರಷ್ಟನ್ನು ಈಡೇರಿಸಿದ್ದು, ಇನ್ನುಳಿದ ಶೇ.5ರಷ್ಟು ಭರವಸೆಗಳು ಕಾರ್ಯಗತಗೊಳ್ಳುವ ಕಾರ್ಯ ಮುಂದುವರೆಯಲಿದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು(ತೋಟಪ್ಪ) ಕುರಡಗಿ ತಿಳಿಸಿದರು.

Advertisement

ಬಿಜೆಪಿ ಸಂಕಲ್ಪ ಪತ್ರ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
3ನೇ ಬಾರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಎಲ್ಲ ವರ್ಗದ ಜನಾಭಿಪ್ರಯವನ್ನು ಜಿಲ್ಲೆಯಾದ್ಯಂತ ಪಡೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭವಾಗಿದೆ. ಸಾರ್ವಜನಕರು ಸಲಹೆ ಪೆಟ್ಟಿಗೆಯ ಮೂಲಕ ಅಭಿಪ್ರಾಯ ನೀಡಬಹುದು.9090902024 ಸಂಖ್ಯೆಗೆ ಮಿಸ್ಡ್ಕಾಲ್ ನೀಡಿ ಸಲಹೆ ನೀಡಬಹುದು ಮತ್ತು ನಮೋ ಆಪ್ ಮೂಲಕ ತಮ್ಮ ಮೊಬೈಲ್‌ಗಳಲ್ಲಿ ನೇರವಾಗಿ ಆನ್‌ಲೈನಲ್ಲಿ ಸಲಹೆ ನೀಡಬಹುದು ಎಂದು ತಿಳಿಸಿದರು.

ಹಾವೇರಿ ಲೋಕಸಭಾ ಚುನಾವಣೆ ಪ್ರಣಾಳಿಕೆ ಪ್ರಮುಖರು, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ಶಶಿಧರ ದಿಂಡೂರ, ಸಹ-ಸಂಚಾಲಕ ರಮೇಶ ಸಜ್ಜಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ರಾಘವೇಂದ್ರ ಯಳವತ್ತಿ, ಪ್ರಕಾಶ ಬಾಕಳೆ, ಮಹೇಶ ದಾಸರ, ಅಶೋಕ ಕರೂರ ಮುಂತಾದವರು ಉಪಸ್ಥಿತರಿದ್ದರು.

ಈ ಅಭಿಯಾನವು ಮಾರ್ಚ್ವರೆಗೆ 15 ದಿನಗಳ ಕಾಲ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಸಮಾಜದ ವಿವಿಧ ಕ್ಷೇತ್ರದ ನಾಗರಿಕರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಕಾರಣ, ಗದಗ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೂ ಸಲಹೆ ನೀಡುವ ಅವಕಾಶವನ್ನು ನರೇಂದ್ರ ಮೋದಿಯವರು ನೀಡಿದ್ದು, ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ವಿಶ್ವ ಗುರುವನ್ನಾಗಿಸಲು ಮತ್ತು ಭಾರತ ದೇಶ ಸುಭದ್ರ ದೇಶವನ್ನಾಗಿಸಲು ಶ್ರಮಿಸಬೇಕಿದೆ ಎಂದು ರಾಜು ಕುರುಡಗಿ ವಿನಂತಿಸಿದರು.


Spread the love

LEAVE A REPLY

Please enter your comment!
Please enter your name here