ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ಸದಾ ಸಕ್ರಿಯರಾಗಿರುತ್ತಾರೆ. ಬ್ರ್ಯಾಂಡ್ ಪ್ರಚಾರ, ಸಿನೆಮಾ ಪ್ರಮೋಷನ್‌ಗಳ ಜೊತೆಗೆ ತಮ್ಮ ಹಳೆಯ ನೆನಪುಗಳನ್ನು ಸಹ ಆಗಾಗ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಅವರದ್ದು. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಸ್ಮೃತಿಗಳನ್ನು ನೆನಪಿಸಿಕೊಂಡಿದ್ದಾರೆ.
ಸಮಂತಾ ಜಿಮ್‌ನಲ್ಲಿ ವರ್ಕೌಟ್ ಮಾಡಿ ತಮ್ಮ ಬೆನ್ನಿನ ಸ್ಟ್ರಾಂಗ್ ಲುಕ್ ಅನ್ನು ಮೂಡಿಸಿದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಮನದಾಳದ ಭಾವನೆಗಳನ್ನು ಹೊತ್ತ ಸಾಲುಗಳನ್ನೂ ಸೇರಿಸಿದ್ದಾರೆ. ಅನಾರೋಗ್ಯದಿಂದ ಬಳಲಿದ ನಂತರ ಅದೇ ಶಕ್ತಿಯಲ್ಲಿ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲವೋ ಎಂಬ ಸೂಚನೆ ಫೋಟೋ ಮತ್ತು ಬರಹದಲ್ಲಿ ಕಾಣುತ್ತದೆ. ಹೀಗಾಗಿ ‘ಆ್ಯಕ್ಷನ್ ಮೋಡ್’, ‘ಬೀಸ್ಟ್ ಮೋಡ್’ ಎಂದು ಕ್ಯಾಪ್ಶನ್ ಹಾಕಿ ಫಿಟ್ನೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಸಮಂತಾ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಆಗಾಗ ಕಾಣಿಸಿಕೊಂಡಿರುವುದು, ಹಾಗೂ ಎರಡನೇ ಮದುವೆ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳು ಪದೇಪದೇ ಸುದ್ದಿಯಾಗುತ್ತಿವೆ. ಇಬ್ಬರೂ ಹಲವು ಸ್ಥಳಗಳಿಗೆ ಒಟ್ಟಿಗೆ ಭೇಟಿ ನೀಡಿರುವುದರಿಂದ ಊಹಾಪೋಹವೂ ಹೆಚ್ಚಾಗಿದೆ.
ಇದರ ಮಧ್ಯೆ, ಸಮಂತಾಳ ಜಿಮ್ ವರ್ಕೌಟ್ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.


