ಬೆನ್ನು ನೋವಿಗೆ ಒದ್ದಾಟ: ಆಪರೇಷನ್ʼಗೆ ಒಪ್ಪಿಗೆ ಕೊಟ್ಟ ನಟ ದರ್ಶನ್

0
Spread the love

ನಟ ದರ್ಶನ್‌ ಕೊಲೆ ಪ್ರಕರಣದಲ್ಲಿ ಬೇಲ್‌ ಪಡೆದು ಜೈಲಿನಿಂದ ರಿಲೀಸ್‌ ಆಗಿದ್ದಾರೆ. ಸುಮಾರು 6 ತಿಂಗಳಿಗಿಂತಲೂ ಹೆಚ್ಚು ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿಯ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸಿದ ನಟ ದರ್ಶನ್‌ ಗೆ ಒಂದು ರೀತಿಯಲ್ಲಿ ಬಿಗ್‌ ರಿಲೀಫ್‌ ಸಿಕ್ಕಿತ್ತು.

Advertisement

ಬೆನ್ನು ನೋವಿನ ಕಾರಣದಿಂದ ಚಿಕಿತ್ಸೆ ಪಡೆದು ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಮೈಸೂರಿಗೆ ಹೋಗಲು ಕೋರ್ಟ್‌ನಿಂದ ಅನುಮತಿ ಪಡೆದು ನಂತರ ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ಗೆ ತೆರಳಿ ಸುಧಾರಿಸಿಕೊಳ್ಳುತ್ತಿದ್ದರು.

ಆದರೆ  ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಪ್ಪಿದ್ದಾರೆ. ಇಷ್ಟು ದಿನಗಳ ಕಾಲ ಅವರು ಫಿಸಿಯೋ ಥೆರಪಿ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಂಕ್ರಾತಿ ವೇಳೆಗೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರಿಗೆ ವೈದ್ಯ ಅಜಯ್ ಹೆಗಡೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಕಡೆಯಿಂದ ಈಗ ಮಾಹಿತಿ ಲಭ್ಯವಾಗಿದೆ.

 


Spread the love

LEAVE A REPLY

Please enter your comment!
Please enter your name here