ಕಾಲೇಜಿಗೆ ಬರುವಂತೆ ಬುದ್ದಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

0
Spread the love

ತುಮಕೂರು: ಕಾಲೇಜಿಗೆ ಬರುವಂತೆ ಉಪನ್ಯಾಸಕಿ ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶ್ರೀದೇವಿ ಕಾಲೇಜಿನಲ್ಲಿ ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಓದುತ್ತಿರುವ ಜೀವನ್ ಗೌಡ ಎರಡು ದಿನಗಳಿಂದ ತರಗತಿಗಳಿಗೆ ಹಾಜರಾಗಿರಲಿಲ್ಲ.

Advertisement

ಇದರಿಂದ ಉಪನ್ಯಾಸಕಿ ಹರ್ಷಿತ ಜಾಧವ್ ಅವರು ಜೀವನ್ ತಂದೆಗೆ ಮಾಹಿತಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಮನನೊಂದು ಜೀವನ್ ಗೌಡ ಕಾಲೇಜು ಸಮೀಪದಲ್ಲೇ ವಿಷ ಸೇವಿಸಿದ್ದಾನೆ. ಅದಲ್ಲದೆ ನನ್ನ ಸಾವಿಗೆ ಉಪನ್ಯಾಸಕಿ ಕಾರಣ ಎಂದು ಡೆತ್‌ ನೋಟ್ ಬರೆದಿದ್ದನು.

ಇನ್ನೂ  ವಿಷ ಸೇವಿಸಿದ ಬಳಿಕ ಜೀವನ್ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣವೇ ಅವನನ್ನು ಶ್ರೀದೇವಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here