ಚಾಮರಾಜನಗರ: ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಜೀವದ ಹಂಗು ತೊರೆದು ಗೃಹರಕ್ಷಕ ದಳದ ಸಿಬ್ಬಂಧಿ ರಕ್ಷಿಸಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಚಿಕ್ಕರಂಗನಾಥಕೆರೆಯಲ್ಲಿ ನಡೆದಿದೆ. ಹನೂರು ತಾಲೋಕು ಕಣ್ಣೂರಿನ ರಾಜಮ್ಮ(17) ಕೆರೆಗೆ ಬಿದ್ದಿದ್ದ ವಿದ್ಯಾರ್ಥಿನಿಯಾಗಿದ್ದು,
Advertisement
ಹತ್ತಿರದಲ್ಲೇ ಇದ್ದ ಗೃಹರಕ್ಷಕ ಕೃಷ್ಣಮೂರ್ತಿ ಕೆರೆಗೆ ಧುಮುಕಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಕೆರೆಗೆ ಬಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯರ ಸಹಕಾರದಿಂದ ಕೃಷ್ಣಮೂರ್ತಿ ಮೇಲೆತ್ತಿದ್ದಾರೆ.
ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಮ್ಮ ಜೀವ ಜೀವದ ಹಂಗು ತೊರೆದು ವಿದ್ಯಾರ್ಥಿನಿಯ ಜೀವ ಉಳಿಸಿದ ಹೋಮ್ ಗಾರ್ಡ್ ಕೃಷ್ಣಮೂರ್ತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.