ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಮೈಲಾರಪ್ಪ ಮೆಣಸಗಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಆದಿಯೋಗಿ ಎಜುಕೇಷನಲ್ ಟ್ರಸ್ಟ್‌ನ ಸಹ ಸಂಸ್ಥೆಯಾದ ಇನ್‌ಸೈಟ್ ಅಕಾಡೆಮಿಯ ತರಬೇತಿಯಲ್ಲಿ ಮೈಲಾರಪ್ಪ ಮೆಣಸಗಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗದಗ ಬಿ ವಲಯದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಮತ್ತು ಬಾಲಕಿಯರ ಶೆಟಲ್ ಬ್ಯಾಡ್ಮಿಂಟನ್, ಬಾಲಕಿಯರ ಥ್ರೋಬಾಲ್ ಹಾಗೂ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಲಾರಪ್ಪ ಮೆಣಸಗಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ. ಜಯದೇವ ಮೆಣಸಗಿ ಹಾಗೂ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ತರಬೇತಿ ನೀಡಿದ ಅಕಾಡೆಮಿ ಸದಸ್ಯರಿಗೆ, ಕಾಲೇಜು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದಿಯೋಗಿ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ್, ಪವನ್ ಕುಮಾರ್ ಶೇಠ್, ಕುಮಾರ್ ರಾಥೋಡ್, ಎನ್.ಎಂ. ಮುಲ್ಲಾ, ಶರಣು ಮರಗುದ್ದಿ, ವಸೀಂ ರಾಜ್ ದೊಡ್ಡಮನಿ, ಪ್ರಾಚಾರ್ಯ ಶರತ್ ಕುಮಾರ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ತೋರುವಂತೆ ಶುಭಕೋರಿದರು.


