ಆಸಕ್ತಿಯಿಂದ ಮತ ಚಲಾಯಿಸಿದ ವಿದ್ಯಾರ್ಥಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಶಹರದ ಆ್ಯಂಗ್ಲೋ ಉರ್ದು ಬಾಲಕರ/ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಲು ಚುನಾವಣೆಯನ್ನು ಮೊಬೈಲ್ ಇವಿಎಂ ಬಳಸಿ ಮತದಾನ ಪ್ರಕ್ರಿಯೆ ನಡೆಸಲಾಯಿತು.

Advertisement

ಪ್ರಜಾಪ್ರಭುತ್ವದ ಮೌಲ್ಯ, ಮತದಾನದ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಸಲುವಾಗಿ ಶಾಲೆಯಲ್ಲಿ ಶಾಲಾ ಸಂಸತ್ತು ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳು ಮತದಾನ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಂತಸಪಟ್ಟರು.

ಮಕ್ಕಳಿಗೆ ಶಾಲೆಯ ವತಿಯಿಂದ ಚುನಾವಣಾ ಆಯೋಗ ನೀಡುವ ರೀತಿಯಲ್ಲೇ ಗುರುತಿನ ಚೀಟಿ ನೀಡಲಾಗಿತ್ತು. ಇದಕ್ಕೂ ಮೊದಲು ವಿಜ್ಞಾನ ಶಿಕ್ಷಕ ಇಸ್ಮಾಯಿಲ್ ಆರಿ ಮೊಬೈಲ್ ಇವಿಎಂ ಮೂಲಕ ಮತದಾನದ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಒದಗಿಸಿದರು. ವಿದ್ಯಾರ್ಥಿಗಳು ಮತದಾನದ ತಿಳುವಳಿಕೆಯನ್ನು ಪಡೆದುಕೊಂಡು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರೆ, ಮಕ್ಕಳು ತಮ್ಮ ಹಕ್ಕು ಚಲಾಯಿಸಿದರು. ಇದಕ್ಕೂ ಮುನ್ನ ಚುನಾವಣೆಯಲ್ಲಿ ಸ್ಪರ್ಧಿಸಲು ಮಕ್ಕಳು ಮುಖ್ಯ ಚುನಾವಣಾ ಅಧಿಕಾರಿ ಎಂ.ಎಂ ಪೀರಜಾದೆ ಹಾಗೂ ಟಿ.ಐ. ಕಾಲೇಖಾನ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಬಾಲಕರು 7 ಅಭ್ಯರ್ಥಿಗಳು, ಬಾಲಕಿಯರು 4 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದುಕೊಂಡರು. ನಂತರ ಶಾಲಾ ಮುಖ್ಯ ಚುನಾವಣಾಧಿಕಾರಿ ಎಂ.ಎಂ. ಪೀರಜಾದೆ ಮತ್ತು ಟಿ.ಐ. ಕಾಲೇಖಾನ ಮತ ಪೆಟ್ಟಿಗೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಿದರು. ಮತದಾನ ಮಾಡುವ ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಯಿತು. ಬಾಲಕರ ಶಾಲೆಯಲ್ಲಿದ್ದ ಒಟ್ಟು 120 ಮಕ್ಕಳಲ್ಲಿ 110 ಮಕ್ಕಳು ಮತದಾನ ಮಾಡಿದರು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮಾಡಲಾಗಿ, ಒಟ್ಟು 7 ಅಭ್ಯರ್ಥಿಗಳ ಪೈಕಿ 2 ಮಂದಿ ಬಹುಮತದಿಂದ ಶಾಲಾ ಸಂಸತ್ತಿಗೆ ಆಯ್ಕೆಯಾದರು. ಬಾಲಕಿಯರ ಶಾಲೆಯಲ್ಲಿದ್ದ ಒಟ್ಟು 192 ಮಕ್ಕಳಲ್ಲಿ 147 ಮಕ್ಕಳು ಮಾತದಾನ ಮಾಡಿದರು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮಾಡಲಾಯಿತು. 4 ಅಭ್ಯರ್ಥಿಗಳು 2 ವಿದ್ಯಾರ್ಥಿಗಳು ಬಹುಮತದಿಂದ ಶಾಲಾ ಸಂಸತ್ತಿಗೆ ಆಯ್ಕೆಯಾದರು.

ಮಕ್ಕಳಿಗೆ ಚುನಾವಣೆ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲು ನಡೆಸಿದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಭಾಗಿಯಾಗಿ ಹೊಸ ಅನುಭವ ಪಡೆದುಕೊಂಡರು. 10ನೇ ತರಗತಿಯ ವಿದ್ಯಾರ್ಥಿ ಎಸ್.ಕೆ. ಬಾಗೇವಾಡೆ ಪ್ರದಾನ ಮಂತ್ರಿಯಾಗಿ, 10ನೇ ತರಗತಿ ವಿದ್ಯಾರ್ಥಿ ಎ.ಡಿ. ಉಳ್ಳಗಡ್ಡಿ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮೀನಾಜ್ ಕಲ್ಲಿಪಣ್ಣವರ ಪ್ರಧಾನ ಮಂತ್ರಿ, ತನ್ನಜಿಮ್ ಕೊಪ್ಪಳ ಉಪಪ್ರಧಾನಿಯಾಗಿ ಆಯ್ಕೆಯಾದರು.

ಶಾಲಾ ಸಂಸತ್ತು ಚುನಾವಣಾ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಶಾಲಾ ಆಡಳಿತ ಮಂಡಳಿ ಸದಸ್ಯ ಎ.ಎಂ. ಮುಲ್ಲಾ ಮಾತನಾಡಿದರು. ಸಯ್ಯದ್‌ಇಸ್ಮಾಯಿಲ್ ಬಿಜಾಪೂರ, ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಲ್.ಆರ್. ಇಟಗಿ, ಎಂ.ಎ. ರಿಕಾರ್ಟಿ, ಪೈರೋಜ ಡಲಾಯಿತ, ಎಂ.ಎಂ ಪೀರಜಾದೆ, ಎಂ.ಜಿ. ಪಟೇಲ್, ಎನ್.ಕೆ. ಕರಡಿ, ಎಂ.ಎ. ಕಮಾನಗಾರ, ಎಸ್.ಐ. ನದಾಫ್, ಝಡ್.ಎ. ಮುಲ್ಲಾ, ಟಿ.ಐ. ಕಾಲೇಖಾನ, ಎಂ.ಎಚ್. ಜಮಾಲಸಾಬನವರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

“ಶಾಲಾ ಸಂಸತ್ತು ರಚನೆ ಮಾಡಲು ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮತದಾನದ ಹ್ಕಕ್ಕನ್ನು ಪಾರದರ್ಶಕವಾಗಿ ಅಳವಡಿಸಲಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಿಗೆ ಮತದಾನದ ಪ್ರಕ್ರಿಯೆ ಮತ್ತು ಅವರ ಮಾಹಿತಿಯನ್ನು ಒದಗಿಸಿದರೆ ಮುಂದಿನ ಚುನಾವಣೆಗಳಲ್ಲಿ ಎಲ್ಲರೂ ಆಸಕ್ತಿಯಿಂದ ಮತದಾನ ಮಾಡಲು ಮುಂದಾಗುತ್ತಾರೆ. ಇವಿಎಂ ಮೊಬೈಲ್ ಆ್ಯಪ್ ಮೂಲಕ ಸಿಯು, ಬಿಯು, ಪಿವಿವಿಪಿಎಟ್ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಲಾಗಿದೆ”

– ಇಸ್ಮಾಯಿಲ್ ಆರಿ.

ಬಾಲಕರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ.


Spread the love

LEAVE A REPLY

Please enter your comment!
Please enter your name here