ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ರೋಟರಿ ಸರ್ಕಲ್ ಹತ್ತಿರದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಅಧ್ಯಯನ ಭೇಟಿಯನ್ನು ಕೈಗೊಂಡಿದ್ದರು.
Advertisement
ವಿದ್ಯಾರ್ಥಿಗಳಿಗೆ ಬ್ಯಾಂಕಿನ ವ್ಯವಸ್ಥಾಪಕರಾದ ವಾಣಿಶ್ರೀ ಅವರು ಬ್ಯಾಂಕಿನ ಕಾರ್ಯನಿರ್ವಹಣೆ, ಹಣಕಾಸು ಸೌಲಭ್ಯಗಳು, ಇನ್ನಿತರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು. ಮಹಾವಿದ್ಯಾಲಯದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಅಧ್ಯಯನ ಭೇಟಿಯ ಸದುಪಯೋಗ ಪಡೆದುಕೊಂಡರು. ಉಪನ್ಯಾಸಕರಾದ ಪ್ರೊ. ಶ್ವೇತಾ ರಾಚಯ್ಯನವರ, ಪ್ರೊ. ಹರ್ಷ ನೀಲೂಗಲ್, ಪ್ರೊ. ಐ.ಬಿ. ಪಾಟೀಲ ಪಾಲ್ಗೊಂಡಿದ್ದರು.


