ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ.ಎ ಗೃಹ ವಿಜ್ಞಾನ ವಿಭಾಗ ಹಾಗೂ ಬಿ.ಕಾಂ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಮಗ್ಗ ಉದ್ಯಮಗಳ ಸಮಸ್ಯೆಗಳು ಹಾಗೂ ಮಹತ್ವದ ಕುರಿತು ಪ್ರಾಯೋಗಿಕ ಅಭ್ಯಾಸ ಹಾಗೂ ತಿಳುವಳಿಕೆ ಪಡೆಯಲು ಗದಗ ಜಿಲ್ಲೆಯ ನರಸಾಪುರ ಗ್ರಾಮದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ಕಾರ್ಪೊರೇಷನ್ ಹಾಗೂ ವಿವಿಧ ಕೈಮಗ್ಗ ಕೇಂದ್ರಗಳಿಗೆ ಭೇಟಿ ನೀಡಿ ಉದ್ಯಮದ ಪರಿಚಯ ಪಡೆದರು.
ವಿದ್ಯಾರ್ಥಿಗಳು ಜವಳಿ ಉತ್ಪಾದನೆಯ ಪ್ರಾಯೋಗಿಕ ಅಂಶಗಳು ಮತ್ತು ಭಾರತದ ಸಾಂಸ್ಕೃತಿಕ ಮತ್ತು ಆರ್ಥಿಕ ಚೌಕಟ್ಟಿನಲ್ಲಿ ಕೈಮಗ್ಗಗಳ ಪಾತ್ರದ ವಿವರಣೆ ಪಡೆದರು. ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೀಣಾ ತಿಲಾಪೂರವರು ವಿದ್ಯಾರ್ಥಿಗಳಿಗೆ ಬಟ್ಟೆ ಮತ್ತು ನೂಲಿನ ಪ್ರಕಾರಗಳ ಬಗ್ಗೆ ವಿವರಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ.ಕೆ. ಮಠ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುವ ಇಂತಹ ವಿದ್ಯಾರ್ಥಿ ಅಧ್ಯಯನ ಭೇಟಿಯನ್ನು ಹಮ್ಮಿಕೊಂಡಿದ್ದ ಗೃಹ ವಿಜ್ಞಾನ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಾಂಶುಪಾಲರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಪ್ರೊ. ಆಯ್.ಬಿ. ಪಾಟೀಲ, ಪ್ರೊ. ವೀಣಾ ಆರ್.ತಿರ್ಲಾಪೂರ ಮತ್ತು ಅಧ್ಯಯನ ಕೈಗೊಂಡಿದ್ದ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು.



