ರಾಜ್ ಬಿ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರುವ ʻಸು ಪ್ರಮ್ ಸೋʼ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಸುಮಾರು ನೂರು ಕೋಟಿಗೆ ಅಧಿಕ ಕಲೆಕ್ಷನ್ ಮಾಡಿರುವ ಸು ಫ್ರಮ್ ಸೋ ಸಿನಿಮಾ ಇಂದು ಒಟಿಟಿಗೆ ಎಂಟ್ರಿಕೊಟ್ಟಿದೆ. ಥಿಯೇಟರ್ ನಲ್ಲಿ ನೋಡಿದವರು, ನೋಡದವರು ಇಂದು ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದಾಗಿದೆ.
ಇಂದು ಬೆಳಗ್ಗೆಯಿಂದಲೇ ಓಟಿಟಿ ವೇದಿಕೆಯಲ್ಲೂ ಸು ಫ್ರಮ್ ಸೋ ಸಿನಿಮಾ ಪ್ರಸಾರವಾಗುತ್ತಿದ್ದು ಮನೆ ಮಂದಿಯೆಲ್ಲ ಕೂತು ಸಿನಿಮಾ ನೋಡಬಹುದಾಗಿದೆ. ʻಸು ಫ್ರಮ್ ಸೋʼ. ಜುಲೈ 25ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆದ ಈ ಸಿನಿಮಾವು ಕರಾವಳಿಯ ಸೊಗಡು ಮತ್ತು ಕಲಾವಿದರ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದೆ. ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸು ಫ್ರಮ್ ಸೋ, ನಂತರದಲ್ಲಿ ಮಲಯಾಳಂ, ತೆಲುಗು, ತಮಿಳಿನಲ್ಲೂ ಭರ್ಜರಿ ಯಶಸ್ಸು ಗಳಿಸಿತ್ತು.
ಬುಕ್ ಮೈ ಶೋನಲ್ಲಿ ಸಿನಿಮಾದ ಅವಧಿ 2 ಗಂಟೆ 17 ನಿಮಿಷ ಇದೆ. ಆದರೆ, ಒಟಿಟಿಯಲ್ಲಿ 7 ನಿಮಿಷ ಕಡಿಮೆ ತೋರಿಸುತ್ತಿದೆ. ಅಂದರೆ, ಒಟಿಟಿಯಲ್ಲಿ ರನ್ ಟೈಮ್ 2 ಗಂಟೆ 10 ನಿಮಿಷ ಎಂದು ಮಾತ್ರ ತೋರಿಸುತ್ತಿದೆ. ಆ ಏಳು ನಿಮಷ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಯಾವುದಾದರೂ ದೃಶ್ಯಕ್ಕೆ ಕತ್ತರಿ ಹಾಕಿದರೇ ಎನ್ನುವ ಪ್ರಶ್ನೆಯನ್ನೂ ಅನೇಕರು ಕೇಳುತ್ತಿದ್ದಾರೆ.
ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ಸಿನಿಮಾದಲ್ಲಿ ಸ್ಮೋಕಿಂಗ್ ಜಾಹೀರಾತು ಇದೆ. ಅದನ್ನ ಥಿಯೇಟರ್ ಅಲ್ಲಿ ನೋಡಬಹುದು. ಆದರೆ, ಓಟಿಟಿಯಲ್ಲಿ ಅದನ್ನ ತೆಗೆಯಲಾಗುತ್ತದೆಯಂತೆ.



