ಬೆಂಗಳೂರು: ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಒಟ್ಟು 17 ಆರೋಪಿಗಳು ಒಂದು ಕೋರ್ಟ್ಗೆ ವಿಚಾರಣೆಗೆ ಹಾಜರಾಗಿದ್ದಾರೆ. ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳು 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ 6 ತಿಂಗಳ ನಂತರ ಕೋರ್ಟ್ನಲ್ಲಿ ದರ್ಶನ್ ಅವರನ್ನು ನೋಡಿದ ಪವಿತ್ರಾ ಗೌಡ ಭಾವುಕರಾದರು.
ಹಾಲ್ನಲ್ಲಿ ಪವಿತ್ರಗೌಡಗೆ ಪದೇ ಪದೇ ದರ್ಶನ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದರು. ಈ ವೇಳೆ ದರ್ಶನ್ ಬೆನ್ನುತಟ್ಟಿ ಪವಿತ್ರಾ ಅವರನ್ನು ಸಂತೈಸಿ ಕೆಲ ಕ್ಷಣ ಮಾತನಾಡಿದ್ದಾರೆ ಎನ್ನಲಾಗಿದೆ. ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು.
ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಎಲ್ಲಾ ಆರೋಪಿಗಳು ಹಾಲ್ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು. ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ ಬಳಿಕ ಪವಿತ್ರಾ ಗೌಡ ಮತ್ತು ದರ್ಶನ್ ಕೋರ್ಟ್ನಿಂದ ಒಟ್ಟಿಗೆ ಹೊರಬಂದು ಪ್ರತ್ಯೇಕ ಕಾರಿನಲ್ಲಿ ತೆರಳಿದರು.