ಬೆಂಗಳೂರು: ಒಳಮೀಸಲಾತಿ ಜಾರಿ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳ ನಡುವೆ ವಿಧಾನಸೌಧದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಲಾಗಿದೆ. ವರದಿ ಸಲ್ಲಿಕೆ ಬಳಿಕ ಆಯೋಗ ಅಧ್ಯಕ್ಷ ನ್ಯಾ.ನಾಗಮೋಹನದಾಸ್ ಮಾತನಾಡಿ,
ಎರಡು ತಿಂಗಳಿಗಿಂತ ಹೆಚ್ಚು ಕಾಲ ಆಳವಾದ ಅಧ್ಯಯನ ಮಾಡಿ ವರದಿ ಕೊಡಲಾಗಿದೆ. 104 ಪುಟಗಳ ವರದಿ ನೀಡಲಾಗಿದೆ. ಇದು ತರಾತುರಿಯಲ್ಲಿ ಕೊಟ್ಟಿರುವ ವರದಿಯಲ್ಲ, ಸರ್ಕಾರ ವರದಿ ಕೇಳಿರಲಿಲ್ಲ. ನಾವೇ ಸರ್ಕಾರಕ್ಕೆ ಮಧ್ಯಂತರ ವರದಿ ಕೊಟ್ಟಿದ್ದೇವೆ. ಸರ್ಕಾರ ಏನ್ ತೀರ್ಮಾನ ಮಾಡುತ್ತೋ ನೋಡೋಣ ಎಂದರು.
ಮಧ್ಯಂತರ ವರದಿ ಮೀಸಲಾತಿ ಕೊಡಲು ವಿಳಂಬ ಧೋರಣೆ ಮಾಡೋಕೆ ಅಲ್ಲ. ಶಾಶ್ವತ ಪರಿಹಾರ ಕೊಡೋದು ನಮ್ಮ ಇಚ್ಚೆ. ಈ ನಿಟ್ಟಿನಲ್ಲಿ ವರದಿ ಕೊಡಲಾಗಿದೆ. ಮಧ್ಯಂತರ ವರದಿ ಕೊಟ್ಟಿದ್ದೇನೆ. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ. ಮಧ್ಯಂತರ ವರದಿಯಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ. ಸರ್ಕಾರ ಏನ್ ಮಾಡುತ್ತೆ ಅಂತ ಸರ್ಕಾರವನ್ನ ಕೇಳಿ ಎಂದರು.