ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯ ವಾರ್ಡ್ ನಂ.13ರ ಸದಸ್ಯರಾಗಿದ್ದ ನೀಲವ್ವ ಮೆಣಸಿಕಾಯಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನ.23ರಂದು ಚುನಾವಣೆ ಘೋಷಣೆಯಾಗಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.
ಶೋಭಾ ಬಸವರಾಜ ಮೆಣಸಿನಕಾಯಿಯವರು ಬಿಜೆಪಿ ಅಭ್ಯರ್ಥಿಯಾಗಿ ಬಿ.ಫಾರ್ಮ್ ಸಹಿತವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಂಗಾರಪ್ಪ ಮುಳಗುಂದ, ಬಸವರಾಜ ಮೆಣಸಿನಕಾಯಿ, ಭರಮಣ್ಣ ಕೊಡ್ಲಿ, ರಮೇಶ ಹೆಬ್ಬಾಳ ಇದ್ದರು.
ತಾರಾಮತಿ ಮಹಾದೇವಪ್ಪ ಹಂಪಣ್ಣವರ ಅವರು ಬಿಜೆಪಿ ಮತ್ತು ಪಕ್ಷೇತರವಾಗಿ ೨ ನಾಮಪತ್ರ ಸಲ್ಲಿಸಿದರು. ಈ ವೇಳೆ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಚಂದ್ರು ಹಂಪಣ್ಣವರ, ಗಂಗಾಧರ ಉಮಚಗಿ, ನೀಲಪ್ಪ ತೆಗ್ನಳ್ಳಿ, ಬಸವರಾಜ ಅಣ್ಣಿಗೇರಿ ಇದ್ದರು.
ನ.12ರಂದು ನಾಮಪತ್ರಗಳ ಪರಿಶೀಲನೆ ಮತ್ತು ನ.14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ನ.23ರಂದು ಬೆಳಿಗ್ಗೆ 7ರಿಂದ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನ.26ರಂದು ತಹಸೀಲ್ದಾರ ಕಚೇರಿಯಲ್ಲಿ ಮತಗಳ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ ಚಂದ್ರಶೇಖರ ನರಸಮ್ಮನವರ, ಎಸ್.ಎಂ. ಲಮಾಣಿ ಕಾರ್ಯನಿರ್ವಹಿಸುತ್ತಿದ್ದಾರೆ.