ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಮೋಹನ ಮಾಳಶೆಟ್ಟಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಶಿವರಾಜಗೌಡ ಹಿರೇಮನಿಪಾಟೀಲ, ಜಯಶ್ರೀ ಉಗಲಾಟದ, ವಿಜಯಲಕ್ಷ್ಮಿ ಮಾನ್ವಿ, ವಿಜಯ ಮುತ್ತಿನಪೆಂಡಿಮಠ, ಗಂಗಾಧರ ಮೇಲಗಿರಿ, ಅಮರನಾಥ ಗಡಗಿ, ಚನ್ನವೀರ ಹುಣಶಿಕಟ್ಟಿ, ಪ್ರಕಾಶ ಉಗಲಾಟದ, ಬಿ.ಬಿ. ಸೂರಪ್ಪಗೌಡ್ರ, ತಾಲೂಕಾ ನಿರ್ದೇಶಕ ಸ್ಥಾನಕ್ಕೆ ಸಿದ್ರಾಮೇಶ ಹಿರೇಮಠ, ವಿಶ್ವನಾಥ ಹಳ್ಳಿಕೇರಿ, ಶಾಂತಯ್ಯ ಮುತ್ತಿನಪೆಂಡಿಮಠ, ಮಾಂತೇಶ ನಲವಡಿ, ಸಂತೋಷ ಮೇಲಗಿರಿ, ಸಂಗಮೇಶ ಕವಳಿಕಾಯಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವಣ್ಣೆಪ್ಪ ಚಿಂಚಲಿ, ಜಿ.ಎಸ್. ಹಿರೇಮಠ, ಸಿದ್ದು ಪಲ್ಲೇದ, ಮಂಜುನಾಥ ಹುಲ್ಲೂರಮಠ, ಸಿ.ವಿ. ಮಾಳಗುಂಡ, ಚಂದ್ರು ತಡಸದ, ಸುರೇಶ ಚಿತ್ತರಗಿ, ಅಶೋಕ ಸಂಕಣ್ಣವರ, ಕಾಶಯ್ಯ ಹಿರೇಮಠ, ಸಂತೋಷ ಹುಬ್ಬಳ್ಳಿ, ಶೇಖಪ್ಪ ಕರಿಬಿಷ್ಠಿ, ಗುರು ಹಿರೇಮನಿಪಾಟೀಲ, ರಾಹುಲ ಅರಳಿ, ಕಾರ್ತಿಕ ಮುತ್ತಿನಪೆಂಡಿಮಠ, ಶ್ರೀಶೈಲ ಚಳಗೇರಿ, ಮಾಂತೇಶ ನಾಲವಾಡ, ಪ್ರಮೋದ ಮಾನೇದ, ವಿಶ್ವನಾಥ ಶಿರಿಗಣ್ಣವರ, ಶಿವರೆಡ್ಡಿ ಹರ್ಲಾಪೂರ, ಸುರೇಶ ಮರಳಪ್ಪನವರ, ರವಿ ಕವಚಗೇರಿ, ಬಸವರಾಜ ಕರಮುಡಿ, ಸುರೇಶ ಶಿವಳ್ಳಿ, ಮುತ್ತುರಾಜ ಮುಳವಾಡ ಮುಂತಾದವರಿದ್ದರು.