ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಪಟ್ಟಣದಲ್ಲಿ ತಾಲ್ಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಮತ್ತು ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯವನ್ನು ಖಂಡಿಸಿ ಶುಕ್ರವಾರ ತಹಸೀಲ್ದಾರ್ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ನವಲಗುಂದ ಅಸಹಕಾರ ಚಳುವಳಿಗೆ ಚಾಲನೆ ನೀಡಿದ ಮಾತನಾಡಿ, ಸಾರ್ವಜನಿಕರ ವಿವಿಧ ಬೇಡಿಕೆಗಳಿಗನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅವರ ಜನ ವಿರೋಧಿ ನೀತಿಯನ್ನು ಖಂಡಿಸಿ ಅಸಹಕಾರ ಚಳವಳಿ-ಜನ ಕಲ್ಯಾಣ ಯಾತ್ರೆಯನ್ನು ಮುಂಡರಗಿಯಿಂದ ಕಾಶಿ-ಗಯಾ-ಅಯೋಧ್ಯೆಗೆ ಪ್ರಾರಂಭಿಸುತ್ತಿದ್ದೇವೆ ಎಂದರು.
ವಿವಿಧ ಬೇಡಿಕೆಗಳಾದ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ, ಕೊಪ್ಪಳ-ಮುಂಡರಗಿ-ಶಿಗ್ಗಾಂವಿ ರಾಷ್ಟ್ರೀಯ ಹೆದ್ದಾರಿ, ಪ್ರಧಾನ ಮಂತ್ರಿ ವಸತಿ ಆವಾಸ ಯೋಜನೆ, ಬಗರ್ ಹುಕುಂ ಹಕ್ಕು ಪತ್ರ, ಕಾಯ್ದೆ 1978 ಪುನರ್ ಸ್ಥಾಪನೆ ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ಯಾತ್ರಾ ಚಳುವಳಿಯನ್ನು ಪ್ರಾರಂಭಿಸಿದ್ದೇವೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುಭಾಷ ಕುಂಬಾರ, ಮಂಜುನಾಥ ಹುಬ್ಬಳ್ಳಿ, ನಿಂಗಪ್ಪ ಚಿಲವಾಡಗಿ, ಯಲ್ಲಪ್ಪ ಹೊಂಬಳಗಟ್ಟಿ, ಬಸಪ್ಪ ತಿಮ್ಮಪ್ಪ ವಡ್ಡರ, ಹನುಮಂತ ಮಾದರ, ಹನುಮವ್ವ ಬಾಗಲಿ, ರವೀಂದ್ರ ಸುಕ್ಕಪ್ಪನವರ, ಹನುಮಂತಪ್ಪ ಗುತ್ತಣ್ಣವರ, ಮಲ್ವಪ್ಪ ಪಾದಗಟ್ಟಿ, ಪ್ರಜ್ವಲ್ ದೊಡ್ಡಮನಿ, ಈರವ್ವ ಪಾದಗಟ್ಟಿ, ಮಂಜುನಾಥ ಮಾದರ, ಲಕ್ಷ್ಮವ್ವ ಮಾದರ, ಹನುಮಂತಪ್ಪ ಬಾಗಲಿ, ಷಣ್ಮುಖಪ್ಪ ಹಳ್ಳಿಕೇರಿ, ಮುತ್ತವ್ವ ಚಳ್ಳಮಾದರ, ಮ್ಯಾಗೇರಿ ರಂಜಿ, ಬರಮಪ್ಪ ಹರಿಜನ, ಮ್ಯಾಗೇರಿ ಅನ್ನಕ್ಕ, ಲಕ್ಷ್ಮವ್ವ ಹಲಗಿ, ವಿನಾಯಕ ದೊಡ್ಡಮನಿ, ಲಕ್ಷ್ಮವ್ವ ಕುಂಬಾರ, ಮುತ್ತಪ್ಪ ಕುಂಬಾರ, ಆನಂದ ಹೊಸಕುರಬರ, ನೇತ್ರ ಬರಮಗೌಡ್ರ, ರೇಖಾ ಹಿರೆಹಂಚಿನಾಳ, ಹನುಮಂತ ಶೋಭಾ ಚಂದ್ರಗೌಡ ಪೊಲೀಸ್‌ಪಾಟೀಲ ಉಪಸ್ಥಿತರಿದ್ದರು.