ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿ ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 192ನೇ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಐದು ಜನರಿಗೆ ಯಶಸ್ವಿಯಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಯಿತು.
ದಿ. ಅಂದಾನಪ್ಪ ಮಲ್ಲಪ್ಪ ಗೌಡರ ಇವರ ಸ್ಮರಣಾರ್ಥ ಶ್ರೀಮತಿ ಶಾಂತಾದೇವಿ ಎ.ಗೌಡರ ಹಾಗೂ ದಿ. ಡಾ. ಡಿ.ವ್ಹಿ. ಕೋಲೋಳಗಿ ಮತ್ತು ದಿ. ಶಿವಲಿಂಗವ್ವ ಡಿ.ಕೋಲೋಳಗಿ ಇವರ ಸ್ಮರಣಾರ್ಥ ರೊ.ಡಾ. ಪ್ರಕಾಶ ಡಿ. ಕೋಲೋಳಗಿ ಇವರು ಪ್ರಾಯೋಜತ್ವವನ್ನು ವಹಿಸಿದ್ದರು. ಸುಮಾರು 19 ಜನ ರೋಗಿಗಳನ್ನು ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ಯೋಗ್ಯರಾದ 5 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಯುನ್ನು ಕೈಗೊಂಡರು.
ಶಸ್ತ್ರ ಚಿಕಿತ್ಸೆಯ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ರೊ. ಶ್ರೀಧರ ಸುಲ್ತಾನಪೂರ ವಹಿಸಿ, ಸ್ವಾಗತಿಸಿ, ಸಂಸ್ಥೆಯ ಕಾರ್ಯಕ್ರಗಳನ್ನು ತಿಳಿಸಿ ಡಾ. ಪ್ರಕಾಶ ಕೋಲೋಳಗಿ ಹಾಗೂ ದಿ. ಗೌಡರವರು ನೀಡಿದ ದಾನವನ್ನು ಸ್ಮರಿಸಿದರು. ಸಂಸ್ಥೆಯ ಪರವಾಗಿ ಶಾಂತದೇವಿ ಗೌಡರ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ರೊ. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯರಾದ ರೊ. ತಿರ್ಲಾಪೂರ ರೊ. ಶಿವಾಚಾರ್ಯ ಎಸ್. ಹೊಸಳ್ಳಿಮಠ, ರೊ. ಡಾ. ಆರ್.ಬಿ. ಉಪ್ಪಿನ, ರೊ. ಡಾ. ಪ್ರದೀಪ ಉಗಲಾಟ, ರೊ. ಹೆಚ್.ಎಸ್. ಪಾಟೀಲ, ರೊ. ಅಕ್ಷಯ ವ್ಹಿ.ಶೆಟ್ಟಿ, ರೊ. ಚನ್ನವೀರ ಹುಣಶಿಕಟ್ಟಿ, ರೊ. ಮಹಾಂತೇಶ ಬಾತಾಖಾನಿ, ಡಾ. ಪ್ರಕಾಶ ಡಿ. ಕೋಲೋಳಗಿ, ಡಾ. ನಾಗರತ್ನ ಕೋಲೋಳಗಿ, ಅನ್ನಪೂರ್ಣ ಗುಗ್ಗರಿ ಮುಂತಾದವರು ಉಪಸ್ಥಿತರಿದ್ದರು.
ಈ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ರುದ್ರೇಶ, ನೇತ್ರಾ, ಮಲ್ಲಪ್ಪ ಕುಂಬಾರ, ಜ್ಯೋತಿ ದೊಡ್ಡಮನಿ, ದೀಪಾ, ಆನಂದ ಸಿಂಗ್ರಿ ಚಿಕಿತ್ಸೆ ನಡೆಸಲು ಸಹಕರಿಸಿದರು.