HomeKarnataka Newsಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ: 30 ಅಡಿ ಆಳದ ಬಾವಿಗೆ ಬಿದ್ದ ಎರಡು ಕಾಡಾನೆ ರಕ್ಷಣೆ!

ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ: 30 ಅಡಿ ಆಳದ ಬಾವಿಗೆ ಬಿದ್ದ ಎರಡು ಕಾಡಾನೆ ರಕ್ಷಣೆ!

For Dai;y Updates Join Our whatsapp Group

Spread the love

ಆನೇಕಲ್:- ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ, 30 ಅಡಿ ಆಳದ ಬಾವಿಗೆ ಬಿದ್ದು ನರಳಾಡುತ್ತಿದ್ದ ಎರಡು ಕಾಡಾನೆಗಳನ್ನು ರಕ್ಷಣೆ ಮಾಡಿದೆ.

ತಮಿಳುನಾಡಿನ ಕುಂಡಲಂ ಗ್ರಾಮದ ಬಳಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಜವಳಗೆರೆ ಕಾಡಿನಿಂದ ಆಹಾರ ಹರಿಸಿ ರೈತರ ಜಮೀನುಗಳಿಗೆ ನುಗ್ಗಿದ್ದವು. ಸಂಜೆಯಾದರೂ ಕಾಡಿನತ್ತ ಮುಖ ಮಾಡದೇ ಅಲ್ಲಿಯೇ ಉಳಿದಿದ್ದ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಪಟಾಕಿ ಸಿಡಿಸಿದ್ದರಿಂದ ರೈತರ ತೋಟಗಳಿಗೆ ನುಗ್ಗಿದ್ದವು. ಈ ವೇಳೆ ಆಯಾತಪ್ಪಿ ಮರಿ ಆನೆ ಹಾಗೂ ಸಲಗ 30 ಅಡಿ ಆಳದ ಬಾವಿಗೆ ಬಿದ್ದಿದ್ದವು.

ಉಳಿದ ಕಾಡಾನೆಗಳು ಕಾಡಿನತ್ತ ಹೊರಟು ಹೋದರೆ ಮರಿ ಆನೆಗಾಗಿ ಬಾವಿ ಬಳಿಯೇ ತಾಯಿ ಆನೆ ರೋಧಿಸುತ್ತಾ ನಿಂತ್ತಿತ್ತು. ಕಾಡಾನೆಯ ರೋಧನೆಯನ್ನು ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಬಾವಿ ಬಳಿ ತೆರಳಿದ್ದು, ಬಾವಿಯಿಂದ ಹೊರಬರಲು ಹರಸಾಹಸಪಡುತ್ತಿರುವುದನ್ನು ಗಮನಿಸಿದ್ದಾರೆ. ಉಳಿದ ಕಾಡಾನೆಗಳು ಕಾಡಿನತ್ತ ಹೊರಟು ಹೋದರೆ ಮರಿ ಆನೆಗಾಗಿ ಬಾವಿ ಬಳಿಯೇ ತಾಯಿ ಆನೆ ರೋಧಿಸುತ್ತಾ ನಿಂತ್ತಿತ್ತು. ಕಾಡಾನೆಯ ರೋಧನೆಯನ್ನು ಕೇಳಿದ ಅರಣ್ಯ ಇಲಾಖೆ, ಕೂಡಲೇ ಎರಡು ಜೆಸಿಬಿಗಳ ಮೂಲಕ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದು, ಕಾಡಾನೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!