ಇದೆಂಥಾ ವಿಕೃತಿ: ಬಾಲಕನ ಬಟ್ಟೆ ಬಿಚ್ಚಿ ಚಡ್ಡಿಗೆ ಇರುವೆ ಬಿಟ್ಟ ನೀಚರು, ಆರೋಪಿಗಳು ಅರೆಸ್ಟ್!

0
Spread the love

ದಾವಣಗೆರೆ:- ಜಿಲ್ಲೆಯಲ್ಲಿ ಅಮಾನವೀಯ ಕೃತ್ಯ ಒಂದು ಬೆಳಕಿಗೆ ಬಂದಿದೆ. ಬಾಲಕನೋರ್ವನನ್ನು ಬೆತ್ತಲೆ ಮಾಡಿದ ನೀಚರು, ಬಳಿಕ ಆತನ ಚಡ್ಡಿಗೆ ಇರುವೆ ಬಿಟ್ಟು ವಿಕೃತಿ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೃತ್ಯ ನಡೆಸಿದ 10 ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಹೌದು, ಚನ್ನಗಿರಿಯ ಅಸ್ತಾಪನಹಳ್ಳಿ ಗ್ರಾಮದಲ್ಲಿ ಏ.4 ರಂದು ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಕಳ್ಳತನ ಮಾಡಿದ್ದಾನೆ ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿ ಬಾಲಕನ ಸೋದರಮಾವ ಸೇರಿದಂತೆ ಅತನ ಸಂಬಂಧಿಕರೇ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕನನ್ನು ಅಮಾನವೀಯವಾಗಿ ಥಳಿಸಿ, ಅಡಿಕೆ ಗಿಡಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದರು. ಚಡ್ಡಿಯೊಳಗೆ ಹಾಗೂ ಮೈ ಮೇಲೆ ಕೆಂಪು ಇರುವೆ ಬಿಟ್ಡು ವಿಕೃತಿ ಮೆರೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಚನ್ನಗಿರಿ ಠಾಣೆ ಪೊಲೀಸರು, ಗ್ರಾಮದ ಸುಭಾಷ್ (23), ಲಕ್ಕಿ(21) ದರ್ಶನ್ (22), ಪರಶು (25) ಶಿವದರ್ಶನ್ (23) ಹರೀಶ್ (25), ಪಟ್ಟಿ ರಾಜು(20), ಭೂಣಿ (18) ಸುಧನ್ ಅಲಿಯಾಸ್ ಮಧುಸೂಧನ್ (30) ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹತ್ತು ಜನರಲ್ಲಿ ಈಗಾಗಲೇ 3 ಜನರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here