ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ನಿನ್ನೆ ಗ್ರಾಮ್ಗೆ 185 ರೂ ಏರಿಕೆಯಾದ ಚಿನ್ನದ ದರ ಇಂದು ಮತ್ತಷ್ಟು 200 ರೂ ಹೆಚ್ಚಳ ಕಂಡಿದೆ. ಅಂದರೆ ಎರಡು ದಿನಗಳಲ್ಲಿ ಒಟ್ಟು ಸುಮಾರು 400 ರೂಗಳಷ್ಟು ಏರಿಕೆಯಾಗಿದೆ.
ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ 15,000 ರೂ ಗಡಿಯನ್ನು ದಾಟಿದ್ದು, ವಿದೇಶಿ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯೂ ನಿನ್ನೆ ಹಾಗೆಯೇ ಇಂದು ಕೂಡ 5 ರೂ ಏರಿಕೆಯಾಗಿದೆ.
ದೇಶದಲ್ಲಿನ ಇಂದಿನ ದರ (ಏಪ್ರಿಲ್ 1)
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,51,480
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,38,850
- 18 ಕ್ಯಾರಟ್ ಚಿನ್ನ (1 ಗ್ರಾಂ): ₹11,361
- ಬೆಳ್ಳಿ (100 ಗ್ರಾಂ): ₹25,500
- ಬೆಳ್ಳಿ (1 ಗ್ರಾಂ): ₹255
ಬೆಂಗಳೂರಿನ ದರ
- 24 ಕ್ಯಾರಟ್ (1 ಗ್ರಾಂ): ₹15,148
- 22 ಕ್ಯಾರಟ್ (1 ಗ್ರಾಂ): ₹13,885
- ಬೆಳ್ಳಿ (1 ಗ್ರಾಂ): ₹255
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು: ₹13,885
- ಚೆನ್ನೈ: ₹14,050
- ಮುಂಬೈ: ₹13,885
- ದೆಹಲಿ: ₹13,900
- ಕೋಲ್ಕತಾ: ₹13,885
- ಕೇರಳ: ₹13,885
- ಅಹಮದಾಬಾದ್: ₹13,890
- ಜೈಪುರ್: ₹13,900
- ಲಕ್ನೋ: ₹13,900
- ಭುವನೇಶ್ವರ್: ₹13,885
ಚಿನ್ನ-ಬೆಳ್ಳಿ ದರ ಏರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಚಲನವಲನಗಳು ಹಾಗೂ ಆರ್ಥಿಕ ಅನಿಶ್ಚಿತತೆಗಳು ಪ್ರಮುಖ ಕಾರಣಗಳೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



