ವಿಜಯಪುರ:- ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ಪಾಪ ರೈತ ಏನು ಮಾಡ್ಬೇಕು ಹೇಳಿ. ಅವನ ಕಷ್ಟ ಕೇಳೋರು ಯಾರು ಹೇಳಿ. ಅದರಂತೆ ಇಲ್ಲೋರ್ವ ರೈತ ಈರುಳ್ಳಿ ದರ ದಿಢೀರ್ ಕುಸಿತ ಹಿನ್ನೆಲೆ ರಸ್ತೆಗೆ ಈರುಳ್ಳಿ ಸುರಿದು ನಡುರಸ್ತೆಯಲ್ಲೇ ಹೊರಳಾಡಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.
Advertisement
ನಂದಪ್ಪ ಎಂಬ ರೈತ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ನಿವಾಸಿ ಆಗಿದ್ದಾನೆ. ಕ್ವಿಂಟಾಲ್ ಈರುಳ್ಳಿಗೆ 250 ರೂ. ದರ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿ ರೈತ ಹೀಗೆ ಮಾಡಿದ್ದಾನೆ. ಈ ವೇಳೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಾರೆ ರೈತನ ಗೋಳಾಟ ಕಂಡು ನೆರೆದಿದ್ದ ಸಾರ್ವಜನಿಕರು ಮರುಕ ವ್ಯಕ್ತಪಡಿಸಿದರು.