ನವದೆಹಲಿ: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ. ಇಸ್ರೇಲ್ ನಲ್ಲಿ 40 ಸಾವಿರ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಸದಾ ಸೈರನ್ ಸದ್ದು, ವಿಮಾನಗಳ ಹಾರಾಟ, ವಿಮಾನಗಳು ನೆಲಕ್ಕಪ್ಪಳಿಸುವ ರೀತಿ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದರ ನಡುವೆ ಅಡುಗೆ ಎಣ್ಣೆ ಬೆಲೆ 3-4 ರೂ. ಏರಿಕೆಯಾಗಿದೆ.
ಸದ್ಯ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲ ವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ಒಂದೆಡೆ ಕಚ್ಛಾ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಡುಗೆ ಎಣ್ಣೆ ಬೆಲೆ ಶನಿವಾರದಿಂದಲೇ ಲೀಟರ್ಗೆ 3 ರಿಂದ 4 ರೂ. ಏರಿಕೆಯಾಗಿದೆ.
ಖಾದ್ಯ ತೈಲಗಳಾದ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ ಹಾಗೂ ದೀಪದ ಎಣ್ಣೆಯಲ್ಲಿಯೂ ಏರಿಕೆಯಾಗಿದೆ. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರೆದರೆ ಲೀಟರ್ಗೆ 10 ರಿಂದ 30 ರೂ.ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಬೆಲೆ ಏರಿಕೆ ಯಾವುದು ಎಷ್ಟು…!
ಬ್ರ್ಯಾಂಡ್ ಎಷ್ಟಿತ್ತು? ಎಷ್ಟಾಗಿದೆ?
*ಸನ್ ಫ್ಲವರ್ ಆಯಿಲ್ 139ರೂ. 141ರೂ.
*ಗೋಲ್ಡ್ ವಿನ್ನರ್ 142ರೂ. 145ರೂ.
*ರುಚಿಗೋಲ್ಡ್ 110ರೂ. 112ರೂ.
*ಜೆಮಿನಿ 147ರೂ. 150ರೂ.
*ಫ್ರೀಡಂ 137ರೂ. 141ರೂ.
*ದೀಪದ ಎಣ್ಣೆ 111ರೂ. 114ರೂ.
Israel-Iran conflict: ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್ ಏರಿಕೆ: ಯಾವ ಎಣ್ಣೆ ಎಷ್ಟು ಬೆಲೆ: ಇಲ್ಲಿದೆ ವಿವರ
Advertisement