ಹಾಸನ್- ಸೋಲಾಪುರ ಎಕ್ಸ್’ಪ್ರೆಸ್ ರೈಲಿನಲ್ಲಿ ಏಕಾಏಕಿ ಹೊಗೆ..! ಆಮೇಲೇನಾಯ್ತು?

0
Spread the love

ಕಲಬುರಗಿ: ಬ್ರೇಕ್ ಬೈಡಿಂಗ್ ದೋಷದಿಂದ ಹಾಸನ – ಸೋಲಾಪುರ ಎಕ್ಸಪ್ರೇಸ್ ರೈಲಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಜರುಗಿದೆ. ಶಹಬಾದ್ ತಾಲೂಕಿನ ಮರತೂರ ಬಳಿ ಈ ಘಟನೆ ಜರುಗಿದೆ.

Advertisement

ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ, ಪಾಯಿಂಟ್ ಮ್ಯಾನ್ ಇದನ್ನು ಗಮನಿಸಿ ರೇಡ್ ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿ, ಕೋಚ್ ಸಂಖ್ಯೆ CR 227454 LS-5 ಎಂಜಿನ್ ನಿಂದ 4ನೇ ಕೋಚ್‌ನಲ್ಲಿ ಕಾಣಿಸಿಕೊಂಡಿದ್ದ ಬ್ರೇಕ್ ಬೈಂಡಿಂಗ್ ಸಮಸ್ಯೆ ದೋಷ ಸರಿಪಡಿಸಲಾಗಿದೆ.

ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಬ್ರೇಕ್ ಬೈಡಿಂಗ್ ದೋಷ ಸರಿಪಡಿಸಿದ ಬಳಿಕ ಪುನಃ ರೈಲು ಸಂಚರಿಸಿದೆ.


Spread the love

LEAVE A REPLY

Please enter your comment!
Please enter your name here