ಬಿಗ್ ಬಾಸ್ ಕನ್ನಡ ಸೀಸನ್ 11ನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಕಾರ್ಯಕ್ರಮ ನೋಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ವಾರದ ಕಥೆ ಕಿಚ್ಚನ ಜೊತೆ ನೋಡಲು ವೀಕ್ಷಿಕರು ತುದಿಗಾಲಲ್ಲಿ ನಿಂತಿರ್ತಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಟಿಆರ್ ಪಿ ನೀಡುವ ಸದಸ್ಯರು ಯಾರು ಎಂಬುದನ್ನು ಸುದೀಪ್ ತಿಳಿಸಿದ್ದಾರೆ.
ಕಳೆದ 11 ವರ್ಷಗಳಿಂದ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಆದರೆ ತಾಯಿಯ ನಿಧನದ ಹಿನ್ನೆಲೆಯಲ್ಲಿ ಸುದೀಪ್ ಎರಡು ವಾರಗಳ ಕಾಲ ಕಾರ್ಯಕ್ರಮ ನಿರೂಪಣೆ ಮಾಡಿರಲಿಲ್ಲ. ಆ ವಾರ ಟಿಆರ್ಪಿ ಕುಸಿದಿತ್ತು. ಈಗ ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವಾಗ ಇದರ ಟಿಆರ್ಪಿಯಲ್ಲಿ ಭರ್ಜರಿ ಏರಿಕೆ ಕಂಡಿದೆ.
ಸೂಪರ್ ಸಂಡೇ ವಿಥ್ ಬಾದ್ ಷಾ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಮನೆಮಂದಿಗೆ ಒಂದು ಫನ್ ಟಾಸ್ಕ್ ನೀಡಿದ್ದರು. ಅದೇನೆಂದರೆ ಮನೆಯ ಯಾವ ಸ್ಪರ್ಧಿಯಿಂದ ಶೋಗೆ ಎಷ್ಟು ಟಿಆರ್ಪಿ ಬರುತ್ತಿದೆ ಎಂದು ಪಾಯಿಂಟ್ಸ್ ನೀಡಬೇಕಿದೆ. ಆದರೆ, ಈ ಫನ್ ಗೇಮ್ನಲ್ಲಿಯೂ ಸಹ ಕೆಲವು ಸ್ಪರ್ಧಿಗಳು ಸುದೀಪ್ ಎದುರೇ ಜಗಳ ಮಾಡಿಕೊಂಡಿದ್ದಾರೆ. ಆಗ ಸುದೀಪ್ ‘ಒಬ್ಬರೂ ನಾನು ಮನೆಯಲ್ಲಿ ಏನೂ ಮಾಡುತ್ತಿಲ್ಲ, ಹೀಗಾಗಿ ನನ್ನನ್ನು ನಾನು ಕೆಳಕ್ಕೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿಲ್ಲ. 12 ಟಿವಿಆರ್ ಬರೋಕೆ ನೀವಲ್ಲ, ನಾನು ಕಾರಣ’ ಎಂದರು.
ಈ ವೇಳೆ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇದು ಹೌದು ಎನಿಸಿದೆ. ಹೀಗಾಗಿ, ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ‘ಹೊರಗೆ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿರಲ್ಲ. ಹೊರಗೆ ಬೇರೆಯದೇ ಇರುತ್ತದೆ’ ಎಂದು ತಿಳಿಸಿದರು.