ಕಿಚ್ಚ ಸುದೀಪ್ ನಟನೆಯ ಬಿಲ್ಲ ರಂಗ ಬಾಷಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಾಕಷ್ಟು ತ್ವರಿತಗತಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯುತಿದ್ದು ಸಾಕಷ್ಟು ಭದ್ರತೆಯಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಈ ಮಧ್ಯೆ ಚಿತ್ರದ ಒಂದಷ್ಟು ಹೊಸ ಅಪ್‌ಡೇಟ್ ಹೊರ ಬಂದಿದ್ದು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.
ಇದುವರೆಗೂ ಬಿಲ್ಲ ರಂಗ ಬಾಷಾ ಸಿನಿಮಾದ ಶೂಟಿಂಗ್ ಹಂತದ ಯಾವುದೇ ಮಾಹಿತಿ ಹೊರ ಬಿದ್ದಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ ಸಿನಿಮಾದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಬುಜ್ಜಿ ಕಾರುಗಳನ್ನು ಬಳಸಲಾಗಿದೆ ಎನ್ನಲಾಗುತ್ತಿದ್ದು ಇದರ ಫೋಟೋ ಕೂಡ ಇತ್ತೀಚೆಗೆ ವೈರಲ್ ಆಗಿದೆ. ಆದರೆ ಸಿನಿಮಾ ತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಬಿಲ್ಲ ರಂಗ ಬಾಷಾ ಚಿತ್ರಕ್ಕೆ ವಿಎಫ್‌ಎಕ್ಸ್ ಕೂಡ ಮಾಡಲಾಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ, ಈ ಒಂದು ಚಿತ್ರದ ವಿಎಫ್‌ಕ್ಸ್ ಅನ್ನ ಯುರೋಪ್ ಅಲ್ಲಿಯೇ ಮಾಡಲಾಗುತ್ತದೆಂತೆ. ಇನ್ನೂ ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಅನೂಪ್ ಭಂಡಾರಿ ಹೊಸ ಲೋಕವನ್ನೆ ಸೃಷ್ಟಿ ಮಾಡಿದ್ದಾರೆ ಎನ್ನಲಾಗತ್ತಿದೆ.
ಬಿಲ್ಲ ರಂಗ ಬಾಷಾ ಚಿತ್ರದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಎರಡನೇ ಹಂತದ ಶೂಟಿಂಗ್ ಆಗಸ್ಟ್ ತಿಂಗಳಿನಿಂದ ಶುರುವಾಗಲಿದೆಯಂತೆ.