ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸಿದ್ದಲಿಂಗ ನಗರದ ಬಸವ ಯೋಗ ಕೇಂದ್ರದ ವಿದ್ಯಾರ್ಥಿನಿ ಹಾಗೂ ಪಾಪನಾಶಿಯ ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ಶಿಕ್ಷಕಿ ಸುಧಾ ಪಾಟೀಲ ಪಿ.ಜಿ. ಡಿಪ್ಲೋಮಾ ಇನ್ ಯೋಗಾ ಸ್ಟಡೀಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸೆ.24ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪದಕ ಪ್ರದಾನ ಮಾಡಿದರು.
ಪದಕ ವಿಜೇತ ಸುಧಾ ಪಾಟೀಲರಿಗೆ ಯೋಗ ಕೇಂದ್ರದ ಚೇರಮನ್ ಎಸ್.ವಿ. ಸಂಕನೂರ, ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಕಾರ್ಯದರ್ಶಿ ಚೇತನ್ ಚುಂಚಾ, ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ, ಡಾ. ಅಶೋಕ ಮತ್ತಿಗಟ್ಟಿ ಮುಂತಾದವರು ಅಭಿನಂದಿಸಿದ್ದಾರೆ.



