ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ಕಾವೇರಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸ್ಥಳೀಯರ ಸಹಾಯದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾನೂನು ವಿದ್ಯಾರ್ಥಿ ಪವಿತ್ರ(20) ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯಾಗಿದ್ದು,
Advertisement
ಆತ್ಮಹತ್ಯೆಗೆಂದು ನಿಮಿಷಾಂಭ ದೇಗುಲದ ಸೇತುವೆ ಬಳಿ ನದಿಗೆ ಹಾರಿದ್ದಳು. ನದಿ ಪ್ರವಾಹದಲ್ಲಿ ಐದಾರು ಕಿ.ಮೀ ಕೊಚ್ಚಿಹೋಗಿ ನದಿ ಮಧ್ಯೆ ನಡುಗಡ್ಡೆಗೆ ಸಿಲುಕಿ ಇಡೀ ರಾತ್ರಿ ನರಳಾಡಿದ್ದಾಳೆ. ಮುಂಜಾನೆ ಯುವತಿಯ ಕಿರುಚಾಟ ಕೇಳಿ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಯಿತು. ಮನೆಯಲ್ಲಿನ ಗಲಾಟೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ರಕ್ಷಣೆ ನಂತರ ಆಕೆಯನ್ನು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.