HomeCrime Newsಡೆತ್ ನೋಟ್ ಬರೆದಿಟ್ಟು ಸೂಸೈಡ್‌.! ಓದಿನಲ್ಲಿ ಮುಂದೆ ಇದ್ದಿದ್ದೆ ಈ ವಿದ್ಯಾರ್ಥಿನಿಗೆ ಕಂಟಕವಾಯಿತಾ.?

ಡೆತ್ ನೋಟ್ ಬರೆದಿಟ್ಟು ಸೂಸೈಡ್‌.! ಓದಿನಲ್ಲಿ ಮುಂದೆ ಇದ್ದಿದ್ದೆ ಈ ವಿದ್ಯಾರ್ಥಿನಿಗೆ ಕಂಟಕವಾಯಿತಾ.?

For Dai;y Updates Join Our whatsapp Group

Spread the love

ಹಾವೇರಿ: ಡೆತ್ ನೋಟ್ ಬರೆದಿಟ್ಟು ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಸೂಸೈಡ್‌ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಜೂನ್ 2 ರಂದು  ಮನೆಯಲ್ಲಿ ಅರ್ಚನಾ ಗೌಡಣ್ಣನವರ (16,)ಸೂಸೈಡ್ ಮಾಡಿಕೊಂಡಿರೊ ವಿದ್ಯಾರ್ಥಿನಿಯಾಗಿದ್ದು,

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿದ್ದ ಅರ್ಚನಾ ಜೂನ್ 2ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್‌ನೋಟ್‌ನಲ್ಲಿ ಸಾವಿಗೆ ಕಾರಣವನ್ನು ಉಲ್ಲೇಖಿಸಿದ್ದಳು. ಹಿರೇಕೆರೂರು ತಾಲೂಕಿನ ದೂದಿಹಳ್ಳಿಯ ವಸತಿ ಶಾಲೆಯಲ್ಲಿ ಅರ್ಚನಾ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಓದಿನಲ್ಲಿ ಮುಂದೆ ಇದ್ದಿದ್ದೆ ಈ ವಿದ್ಯಾರ್ಥಿನಿಗೆ ಕಂಟಕವಾಯಿತಾ.?

ಮೊರಾರ್ಜಿ ವಸತಿ ಶಾಲಾ ಶಿಕ್ಷಕನೊರ್ವನ ಕುಟುಂಬದಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಮೊರಾರ್ಜಿ ಶಾಲೆಯ ಹಿಂದಿ ಶಿಕ್ಷಕನಾಗಿದ್ದ ಆರಿತವುಲ್ಲಾ ಮಗಳು ಝೋಯಾ ಹಾಗೂ‌ ಅರ್ಚನಾ ಇಬ್ಬರೂ ಕ್ಲಾಸ್‌ಮೇಟ್ಸ್ ಆಗಿದ್ದರು. ಓದಿನಲ್ಲಿ ಝೋಯಾಗಿಂತ ಅರ್ಚನಾ ಮುಂದಿದ್ದಳು. ಇದೇ ಕಾರಣದಿಂದ ಝೋಯಾ ತಾಯಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ನನ್ನ ಮಗಳಿಗಿಂತ ನೀನು ಯಾಕೆ ಓದಿನಲ್ಲಿ ಮುಂದೆ ಇದ್ದಿಯಾ ಎಂದು ಕಿರುಕುಳ ನೀಡುತ್ತಿದ್ದರಂತೆ. ಇದರ ಜತೆಗೆ ಅರ್ಚನಾ ವೈಯಕ್ತಿಕ ಕಾರಣಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಸದ್ಯ ವಿದ್ಯಾರ್ಥಿನಿ ಸಾವಿನ ಬಗ್ಗೆ ಸಂಶಯ ಮೂಡಿದ್ದು, ನಿನ್ನೆ ಗುರುವಾರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಜತೆಗೆ ಹಿರೇಕೇರೂರು ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಹೂತಿಟ್ಟಿದ್ದ ವಿದ್ಯಾರ್ಥಿನಿ ಶವ ಹೊರ ತೆಗೆದಿದ್ದಾರೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪ್ಲೊರೆನ್ಸಿಕ್ ತಜ್ಞರು,ವಿದ್ಯಾರ್ಥಿನಿ ಸಂಬಂಧಿಕರು ವಿದ್ಯಾರ್ಥಿನಿ ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ಸ್ಥಳದಲ್ಲಿದ್ದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!