ಹಾಸನ:- ಇನ್ಸ್ಟಾದಲ್ಲಿ ವಿಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವಕ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ಜರುಗಿದೆ.
ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿ ಪವನ್ ಕೆ. (21) ಆತ್ಮಹತ್ಯೆಗೆ ಶರಣಾದ ಯುವಕ. ಪವನ್ ಪಾರ್ಕಿನಲ್ಲಿ ಯುವತಿಯೋರ್ವಳ ಕೈ ಹಿಡಿದು ಕುಳಿತುಕೊಂಡಿದ್ದ, ಇದನ್ನೇ ವಿಡಿಯೋ ಮಾಡಿದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಇದರಿಂದ ಮನನೊಂದ ಪವನ್ ನೇಣಿಗೆ ಶರಣಾಗಿದ್ದಾನೆ. ಇದ್ದ ಒಬ್ಬನೇ ಮಗನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೇವಲ 30 ಸೆಕೆಂಡುಗಳ ಇನಸ್ಟಾಗ್ರಾಮ್ ರೀಲ್ಸ್ ಇನ್ನೂ ಬಾಳಿ ಬದುಕ ಬೇಕಾಗಿದ್ದ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಪವನ್(21) ಎಂಬ ಯುವಕನನ್ನ ಬಲಿ ಪಡೆದಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ರೀಲ್ಸ್ ಮಾಡಿದವರ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ಗಳು ಹಾಗೂ ವ್ಯೂವ್ ಕೂಡ ಬಂದಿದೆ.