Sucide Case: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ದಂಪತಿ ಸೂಸೈಡ್!

0
Spread the love

ನಾಸಿಕ್: ಇಗತ್ಪುರಿ ತಾಲೂಕಿನ ನಾಸಿಕ್​​ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.

Advertisement

ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 6 ರಂದು ಸಂಜೆ 7.45 ರ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ. ದಿನೇಶ್ ದೇವಿದಾಸ್ ಸಾವಂತ್ ( 38) ಮತ್ತು ಅವರ ಪತ್ನಿ ವಿಶಾಖಾ ದಿನೇಶ್ ಸಾವಂತ್ ( 33) ನಾಸಿಕ್ ನಿಂದ ಇಗತ್ಪುರಿಗೆ ಹೋಗುವ ರೈಲ್ವೆ ಹಳಿಯಲ್ಲಿ ಚಲಿಸುವ ರೈಲಿನ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳದಲ್ಲಿ ಪಂಚನಾಮ ನಡೆಸಿ ಘೋಟಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.


Spread the love

LEAVE A REPLY

Please enter your comment!
Please enter your name here