ಮುಂಬೈ:– ಲೈಂಗಿಕ ಕಿರುಕುಳ ಆರೋಪ ಹೊತ್ತ ಅರ್ಚಕ ನೇಣಿಗೆ ಶರಣಾಗಿರುವ ಘಟನೆ ಮುಂಬೈ ಉಪನಗರದ ದೇವಸ್ಥಾನದಲ್ಲಿ ಜರುಗಿದೆ.
52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡವರು. 19 ವರ್ಷದ ಮಹಿಳೆ ಮತ್ತು ಆಕೆಯ ತಂದೆ ಬೆಳಗಿನ(ಶನಿವಾರ) ಜಾವ 2 ಗಂಟೆ ಸುಮಾರಿಗೆ ಕಾಂಡಿವಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಶುಕ್ರವಾರ ರಾತ್ರಿ 10.30ಕ್ಕೆ ಅರ್ಚಕರು ತನಗೆ ಕರೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಬರುವಂತೆ ಆಹ್ವಾನಿಸಿದ್ದಾರೆ ಎಂದು ಆರೋಪಿಸಿದ್ದರು. ಅವರನ್ನು ವಾಪಾಸ್ ಕಳುಹಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಗೆ ದೂರು ನೀಡಲು ಬೆಳಿಗ್ಗೆ ಬರಲು ಹೇಳಿದರು. ಅದಾದ ಬಳಿಕ ಅವರು ಅರ್ಚಕರನ್ನು ಹುಡುಕಲು ಪ್ರಾರಂಭಿಸಿದರು. ಆದರೆ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಕೊನೆಗೆ ಮರುದಿನ ದೇವಾಲಯದೊಳಗೆ ಅರ್ಚಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಆ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕಸ್ಮಿಕ ಸಾವಿನ ವರದಿ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.