ದೊಡ್ಡಬಳ್ಳಾಪುರ:- ಯುವಕನೋರ್ವ ಬೆಳ್ಳಂ ಬೆಳಗ್ಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರದ ನಂದಿಮೋರಿ ಬಳಿ ಜರುಗಿದೆ.
Advertisement
ರಕ್ಷಿತ್ ಬಾಬು (26) ನೇಣಿಗೆ ಶರಣಾದ ಯುವಕ. ಈತ ಕೊನ್ನಘಟ್ಟ ನಿವಾಸಿ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಈತನ ತಾಯಿ ಕೂಡ ನೇಣಿಗೆ ಶರಣಾಗಿದ್ದರು. ತಾಯಿ ಸತ್ತ ನೋವಿನಲ್ಲೇ ಇದ್ದ ಯುವಕ ಇಂದು ತಾನು ನೇಣಿಗೆ ಶರಣಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.